ಪಿಗ್ಗಿ ಬರೆದ ಪುಸ್ತಕದಲ್ಲಿ ಅಂಥದ್ದೇನಿದೆ?

ಆಕೆ ಇರೋದೆ ಹಾಗೆ. ಜಸ್ಟ್ ಬೋಲ್ಡ್ ಅಂಡ್ ಬ್ಯೂಟಿಫುಲ್.

ಎಸ್..ನಾನು ಪ್ರಿಯಾಂಕ ಚೋಪ್ರಾ ಬಗ್ಗೆ ಮಾತಾಡುತ್ತಿದ್ದೇನೆ. ಮಿಸ್ ಇಂಡಿಯಾ ಆದ ಮುಂದಿನ ವರ್ಷಕ್ಕೆ ಅಂದ್ರೆ ಹದಿನೆಂಟು ವರ್ಷ ಆಗಿದ್ದಾಗ  ಬಾಲಿವುಡ್ ಗೆ ಎಂಟ್ರಿ ಕೊಟ್ಟ ಪ್ರಿಯಾಂಕ ಹಿಂದೆ ತಿರುಗಿ ನೋಡಿದ್ದು ಕಡಿಮೆ. ಆಕೆಯ ಸಕ್ಸಸ್ ಗ್ರಾಫ್ ಏರುತ್ತಾ ಹೋಯ್ತು. ಎಲ್ಲಿವರೆಗೆ ಅಂದ್ರೆ ಇವತ್ತು ಭಾರತದ ಬಾಲಿವುಡ್ ಮತ್ತು ಅಮೆರಿಕದ ಹಾಲಿವುಡ್ ನಡುವೆ ವ್ಯಾಪಕವಾಗಿ ಕೇಳಿ ಬರ್ತಿರೋ ಏಕೈಕ ಹೆಸರೆಂದ್ರೆ ಅದು ಪ್ರಿಯಾಂಕಾ ಚೋಪ್ರಾಳದ್ದು. ಸುಮ್ನೆ ಗೆಸ್ ಮಾಡಿ ಭಾರತದಿಂದ ಹೋಗಿ ಅಮೆರಿಕದ ನೆಲದಲ್ಲಿ ದೊಡ್ಡ ಹವಾ ಎಬ್ಬಿಸೋದು ಅಂದ್ರೆ ಸುಮ್ನೆ ಮಾತಲ್ಲ. Quantico  ಹಾಗೆ ಹವಾ ಎಬ್ಬಿಸಿತು.

ಪ್ರಿಯಾಂಕ ತನ್ನದೇ ಆದ ಪ್ರೊಡಕ್ಷನ್ ಕಂಪನಿ  Purple Pebble Productions ಶುರು ಮಾಡಿ ಹೊಸ ಆಲೋಚನೆಗಳಿಗೆ ಪ್ಲಾಟ್ ಫಾರ್ಮ್ ಒದಗಿಸಿದಳು. ‘ವೆಂಟಿಲೇಟರ್’ ನಂಥ ಸಿನಿಮಾ ಮೂರು ನ್ಯಾಷನಲ್ ಅವಾರ್ಡ್ ಬಾಚಿಕೊಂಡಿತ್ತು.

ಪ್ರಿಯಾಂಕಾ ಅಪ್ಪ ಅಮ್ಮನ ಮುದ್ದಿನ ಮಗಳು. ಅದರಲ್ಲೂ ಅಪ್ಪ ಅಂದ್ರೆ ಪ್ರಿಯಾಂಕಗೆ ತುಂಬಾ ಇಷ್ಟ. ಅಪ್ಪನ ಮೇಲಿನ ಪ್ರೀತಿಗಾಗಿ ಕೈ ಮೇಲೆ ‘ಡ್ಯಾಡೀಸ್ ಲಿಟಲ್ ಗರ್ಲ್’ ಅನ್ನೋ ಹಚ್ಚೇ ಹಾಕಿಸಿಕೊಂಡಿದ್ದಾಳೆ.  ಇಂಟರೆಸ್ಟಿಂಗ್ ಏನು ಅಂದ್ರೆ ಅಮ್ಮ ಮಧು ಚೋಪ್ರಾ ಮತ್ತು ಅಪ್ಪ ಅಶೋಕ್ ಚೋಪ್ರಾ ಇಬ್ಬರೂ ಆರ್ಮಿಯಲ್ಲಿ ಡಾಕ್ಟರ್ಸ್ ಆಗಿದ್ದವರು. ಅಮ್ಮನಿಗೆ ಬರೋಬ್ಬರಿ ಒಂಭತ್ತು ಭಾಷೆ ಬರುತ್ತೆ. ನನ್ನ ಅತಿ ದೊಡ್ಡ ಇನ್ ಸ್ಪಿರೇಷನ್ ಅಂದ್ರೆ ಅಮ್ಮ ಅಂತಾಳೆ ಪ್ರಿಯಾಂಕ. ಹೀಗಿದ್ದಾಗಲೇ 2013ರಲ್ಲಿ ತಂದೆ ತೀರಿಹೋಗುತ್ತಾರೆ. ನನ್ನ ಅಪ್ಪನೇ ನನಗೆ ಹೀರೋ. ಅವರು ನನ್ನ ದೊಡ್ಡ ಅಭಿಮಾನಿ ಆಗಿದ್ರು ಅಂತ ಚೋಪ್ರಾ ಅಪ್ಪನನ್ನ ನೆನದು ಕಣ್ಣೀರಾಗಿದ್ದರು.

ಪ್ರಿಯಾಂಕ ಕೇವಲ ಮಾಡೆಲ್ ಅಲ್ಲ. ನಟಿ ಅಲ್ಲ. ಸಿಂಗರ್ ಕೂಡ ಹೌದು. ಆಕೆಯ ಎರಡು ಇಂಟರ್ ನ್ಯಾಷನಲ್ ಆಲ್ಬಮ್ಸ್ ರಿಲೀಸ್ ಆದವು. ಒಂದು In My City. ಎರಡು Exotic. ಇಷ್ಟೇ ಅಂದುಕೊಳ್ಳಬೇಡಿ, ಪ್ರಿಯಾಂಕ ಬರಹಗಾರ್ತಿಯೂ ಹೌದು. 2009ರಲ್ಲಿ ಆಕೆ  ಖ್ಯಾತ ಪತ್ರಿಕೆಯೊಂದರಲ್ಲಿ ಒಂದು ಕಾಲಂ ಶುರು ಮಾಡ್ತಾಳೆ. ಅದರ ಹೆಸರು The Priyanka Chopra Column. ಅದರಲ್ಲಿ ಸಂಬಂಧಗಳ ಬಗ್ಗೆ, ತನ್ನ ಬದುಕಿನ ಅನುಭವಗಳ ಬಗ್ಗೆ ಬರೆಯುತ್ತಿದ್ದಳು.

ಇಷ್ಟೆಲ್ಲಾ ಯಾಕೆ ಹೇಳಬೇಕಾಯ್ತು ಅಂದ್ರೆ ಪ್ರಿಯಾಂಕ ಈಗ ತನ್ನ ಬದುಕಿನ ಬಗ್ಗೆಯೇ ಒಂದು ಪುಸ್ತಕ ಬರೆಯುತ್ತಿದ್ದಾಳೆ. ಅದರ ಹೆಸರು Unfinished. ಅದೀಗ ಫಿನಿಶ್ ಆಗಿದೆ ಅಂತ ಇತ್ತೀಚೆಗಷ್ಟೇ ಪ್ರಿಯಾಂಕ್ ಟ್ವೀಟ್ ಮಾಡಿದ್ದಳು. ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿರುವ ಪ್ರಿಯಾಂಕಾ ಪುಸ್ತಕದಲ್ಲಿ ಏನಿರಬಹುದು ಅನ್ನೋ ಕುತೂಹಲ ಈಗಾಗಲೇ ಅವಳ ಅಸಂಖ್ಯಾತ ಅಭಿಮಾನಿಗಳಲ್ಲಿ ಜೋರಾಗಿದೆ.

 

 

Please follow and like us:
ಪಿಗ್ಗಿ ಬರೆದ ಪುಸ್ತಕದಲ್ಲಿ ಅಂಥದ್ದೇನಿದೆ?

Leave a Reply