ಸಿಡಸಿಡ ಬೈದು ಬಂದವಳ ಎದೆಯಲ್ಲಿ ಬಾಯ್ ಫ್ರೆಂಡ್ ನ ರೊಮ್ಯಾಂಟಿಕ್ ನೆನಪು

ನಿನಗೆ ತಲೆ ಸರಿಯಿಲ್ಲ. ನೀನೊಬ್ಬ ಶುದ್ಧ ಈಡಿಯೆಟ್. ಒಂದು ಹೆಣ್ಣನ್ನ ಹೇಗೆ ಸಂಭಾಳಿಸಬೇಕು ಅನ್ನೋ ಮಿನಿಮಮ್ ಸೆನ್ಸ್ ಗೊತ್ತಿಲ್ಲ. ನಿನ್ನಂಥವನ ಜೊತೆ ಇಷ್ಟು ದಿನ ಇದ್ದಿದ್ದೇ ನಾನು ಮಾಡಿದ ದೊಡ್ಡ ತಪ್ಪು. ಗೆಟ್ ಲಾಸ್ಟ್ ಮಾರಾಯ. ಇವತ್ತೇ ಕೊನೆ. ಇನ್ಯಾವತ್ತೂ ನನ್ನ ಬದುಕಿನಲ್ಲಿ ಬರಬೇಡ.

ಇಷ್ಟು ಒದರಿ, ಸಿಡಸಿಡ ಸಿಟ್ಟು ಮಾಡಿಕೊಂಡು ಸೀದಾ ಮನೆಗೋಗಿ ದಬ್ಬಾಕಿಕೊಂಡವಳ ಕಣ್ಣಲ್ಲಿ ಗಂಗೆ ತುಂಗೆ ಶರಾವತಿ ಎಲ್ಲಾ ಧುಮ್ಮಿಕ್ಕಿ  ಕೊನೆಗೆ ಕಣ್ಣ ಕೊಳ ಖಾಲಿ ಖಾಲಿ.

ಎದ್ದು ಕಿಟಕಿಗೆ ಆತುಕೊಂಡು ನಿಂತು ಒಂದು ನಿಟ್ಟುಸಿರೆಳೆದುಕೊಂಡಳು. ಯಾರೋ ಹಿಂದಿನಿಂದ ಬಂದು ಆಲಂಗಿಸಿದ ಮೃದು ಮಧುರ ಪುಳಕ. ತಿರುಗಿ ನೋಡುತ್ತಾಳೆ, ಯಾರೂ ಇಲ್ಲ. ಹದವಾದ ಬಿಸಿನೀರು ಕಕ್ಕುವ ಶವರ್ ಕೆಳಗೆ ನಿಂತುಕೊಂಡವಳ ಮೈಯಲ್ಲಿ ರೋಮಾಂಚನದ ಬುಗ್ಗೆ.’ ತುಂಟ ಇಲ್ಲೂ ಬಿಡಲ್ವ ನೀನು’ ಅಂತ ಬೈದು ಅಲ್ಲೇ ಶರಣಾಗಿದ್ದ ನೆನಪು ಮತ್ತೆ ನೆನೆಯಿತು. ವಾರ್ಡ್ ರೋಬ್ ಗೆ ಕೈ ಇಟ್ಟಳು ಅಷ್ಟೆ,  ಸೀಕ್ರೆಟ್ ಆಗಿ ಅವನು ತಂದುಕೊಟ್ಟಿದ್ದ ಟ್ರಾನ್ಸ್ ಪರೆಂಟ್ ಒಳ ಉಡುಪು ಕಣ್ಣಿಗೆ ಬಿದ್ದು ಮನಸ್ಸು ಚಂಚಲಗೊಂಡಿತು.  ಬೆಡ್ ಮೇಲೆ ಕೂತವಳ ಮುಂಗುರುಳು ನೇವರಿಸಿ ಕುತ್ತಿಗೆ ಚುಂಬಿಸಿದ ಹಾಗಾಗಿ ಥತ್ ಅಂತ ಹಾಗೆ ಹೂವಿನಷ್ಟು ಮೆದುವಾಗಿದ್ದ ಪಿಲ್ಲೋಗೆ ಒರಗಿದಳು. ಇದೇ ಬೆಡ್ ಮೇಲೆ ನಡೆದ ಕಾಮದಾಟವನ್ನೆಲ್ಲಾ ಹೇಳಲಾ ಅಂತ ಪಿಲ್ಲೋ ಪಿಸುಗುಟ್ಟಿದ ಹಾಗಾಗಿ ದಿಗ್ಗನೆದ್ದು ಕೂತಳು. ಯಾಕೋ ಫ್ರೆಶ್ ಆಗಿ ಅರಳಿನಿಂತ ಬಾಲ್ಕನಿಯ ಹೂಗಳ ನಡುವೆ ಆಕಾಶಕ್ಕೆ ಮುಖಮಾಡಿ ನಿಂತುಕೊಳ್ಳಬೇಕೆನಿಸಿತು. ತುಂತುರು ಮಳೆ. ಇಲ್ಲೇ ಅಲ್ಲವೇನೆ ನೀವಿಬ್ರೂ ತಬ್ಬಾಕಿಕೊಂಡು ಗಂಟೆಗಟ್ಟಲೆ ಕೂತಿದ್ದು. ಹಳದಿ ಬಣ್ಣದ ಹೂವು ಪಲ್ಲು ಹಿಡಿದು ಜಗ್ಗಿದಂಗಾಯ್ತು.

ಇಷ್ಟಾಗೋ ಹೊತ್ತಿಗೆ ಅವಳಿಗೆ ಮತ್ತೆ ಅವನ ಮಧುರ ನೆನಪು. ನೀನಿಲ್ಲದೆ ಬದುಕಲಾರೆ ಅನ್ನೋ ಭಾವವೊಂದು ಎದ್ದು ಕೂತು ಅಪ್ಪಿಕೊಂಡಿತು. ಈಡಿಯಟ್. ಬಿಟ್ಟೆ ಅಂದಮೇಲೂ ಬಿಡದೆ ಕಾಡುವ ಲೋಫರ್ ನೀನು. ಸಣ್ಣಗೆ ನಾಚುತ್ತಾ ಬೈದುಕೊಂಡಳು.

ಫೋನ್ ಟ್ರೈ ಮಾಡಿದ್ರೆ ಸ್ವಿಚ್ಡ್ ಆಫ್. ಗೆಟ್ ಲಾಸ್ಟ್ ಅಂತ ಬಂದಮೇಲೆ ಅವನು ತಾನೆ ಏನು ಮಾಡಿಯಾನು. ಇನ್ಯಾವ ಹುಡುಗಿಯ ಎದೆಯ ಕದ ತಟ್ತಾನೋ ಪೋಲಿ. ನೆವರ್ . ನಾನು ಅದಕ್ಕೆ ಅವಕಾಶ ಕೊಡಲಾರೆ. ಇಷ್ಟು ಸ್ಫುರದ್ರೂಪಿ ಹುಡುಗ ಎದೆಯೊಳಕ್ಕೆ ಬರ್ತಾನೆ ಅಂದ್ರೆ ಯಾರು ತಾನೆ ಬಿಟ್ಟುಕೊಳ್ಳಲ್ಲ. ಅದರಲ್ಲೂ ಅವನು ಪ್ರೀತಿ ಮಾಡೋ ಸ್ಟೈಲ್ ನೋಡಿಬಿಟ್ರೆ ಮುಗಿದೇ ಹೋಯ್ತು. ನಾನೂ ಅದಕ್ಕೆ ತಾನೆ ಫಿದಾ ಆಗಿದ್ದು. ಬೆಡ್ ಮೇಲಂತೂ ಹಸಿದ ಹುಲಿ. ಹೆಣ್ಣಿನ ದೇಹದ ಇಂಚಿಂಚೂ ವಾಂಛೆಯನ್ನೂ ಕೆರಳಿಸುವ ಮನ್ಮಥ ಸಿಕ್ಕರೆ ಯಾವ ಹುಡುಗಿ ತಾನೆ ಬಿಟ್ಟಾಳು! ಏನೂ ಗೊತ್ತಿಲ್ಲದೆ ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದ ನನಗೆ ಇಷ್ಟು ಪೋಲಿತನ ಕಲಿಸಿದ್ದೀಯ. ಇನ್ನು ಎಲ್ಲಾ ಗೊತ್ತಿರುವ ಹುಡುಗಿಯರಿಗೆ ನೀನು ಸಿಕ್ಕಿದರೆ ಗತಿ? ಪ್ಲೀಸ್ ಕಂದ ಯಾವ ಹುಡುಗಿಯನ್ನೂ ಹುಡುಕಬೇಡ. ನನ್ನ ಕಡೆಯಿಂದ ತಪ್ಪಾಗಿದೆ ನಿಜ. ಇನ್ನರ್ಧ ಗಂಟೆಯಲ್ಲಿ ನಿನ್ನ ಬಳಿ ಇರ್ತೇನೆ ಅಂತ ಪಲ್ಲು ಸರಿ ಮಾಡಿಕೊಂಡು ಹೊರಟು ನಿಂತಳು.

ಅದೇ ಜಾಗ. ಅದೇ ಕಾಫಿಯ ಘಮ. ಅವನಿಲ್ಲ ಅಷ್ಟೆ.

ಅವನು ಕೂತಿದ್ದ ಕಲ್ಲಿನ ಮೇಲೆ ಮೆಲ್ಲಗೆ ಕೈಯಾಡಿಸಿದಳು. ಈಡಿಯಟ್. ಬೈದೆ ಅಂದಕೂಡಲೇ ಹೊರಟುಹೋಗೋದಾ?  ನಾನು ಬೈದೆ ಇನ್ನಾರು ಬೈತಾರೆ ಹೇಳು! ನಿನ್ನನ್ನ ಪ್ರೀತಿ ಮಾಡೋ ನನಗೆ ಬೈಯ್ಯೋ ಹಕ್ಕೂ ಕೂಡ ಇದೆ ನೆನಪಿರಲಿ. ಮತ್ತೆ ಫೋನ್ ಮಾಡಿದಳು. ನಾಟ್ ರೀಚಬಲ್.

ಎಲ್ಲಿ ಹಾಳಾದ್ನೋ ಬಡ್ಡಿಮಗ. ಎದುರು ಮನೆ ಹುಡುಗಿ ಕಾಳಾಕ್ತಿದ್ದಾಳೆ ಕಣೆ ಅಂದಿದ್ದ. ಅವಳನ್ನೇನಾದ್ರೂ ಪಟಾಯಿಸಲಿಕ್ಕೆ ಕೂತುಬಿಟ್ನಾ? ಪಟಾಯಿಸೋದೇನು, ಇವನನ್ನ ನೋಡಿದ್ರೆ ಅವರಾಗೇ ತುಪಕ್ ಅಂತ ಬೀಳ್ತಾರೆ. ‘ನೋಡೆ, ನಿನಗೆ ಬೇಡ ಅಂದ್ರೆ ಹೇಳು. ನಾನು ನಿನ್ನ ಹುಡುಗನಿಗೆ  ಮೈ ಮನಸ್ಸು ಎರಡನ್ನೂ ಭರಪೂರ ಧಾರೆ ಎರಿತೀನಿ ಅಂದಿದ್ದಳು ಸ್ವರ್ಣ. ಹಿಡಿದು ಹೇನು ಕುಕ್ಕಿದ ಹಾಗೆ ಕುಕ್ಕಿಬಿಡಬೇಕು ಅನ್ನುವಷ್ಟು ಸಿಟ್ಟು. ಮುಚ್ಕೊಂಡು ಹೋಗೇ ಲೇಯ್ ಅಂತ ರೇಗಿದ್ದೆ.

ಅವತ್ತು ಅವನ ತೋಳು ತಬ್ಬಿಕೊಂಡು  ಬೆಂಗಳೂರಿನ ರಿಂಗ್ ರೋಡ್ ನಲ್ಲೆಲ್ಲಾ ಬೀಟ್ ಹಾಕಿದ್ದು ನೆನಪಾಯ್ತು. ರಾತ್ರಿ ಹನ್ನೊಂದು ಗಂಟೆವರೆಗೆ ಸುತ್ತಿ ಸುತ್ತಿ ಕೊನೆಗೆ ಎಲ್ಲಿ ಬಿಡ್ಲೇ ಮುದ್ದು ನಿನ್ನನ್ನ ಅಂದಿದ್ದ. ಇಲ್ಲೇ ಎಲ್ಲಾದ್ರೂ ಕಾರ್ ಸೈಡ್ ಗಾಕು. ಈ ಕಾರಲ್ಲೇ ಇಡೀ ರಾತ್ರಿ ನಿನ್ನ ತಬ್ಬಿಕೊಂಡು ಮಲಗ್ಬೇಕು ಅನಿಸ್ತಿದೆ ಅಂದಿದ್ದಳು.

ಅವತ್ತು ರಾತ್ರಿ ರೂಮಿಗೆ ಕರೆದುಕೊಂಡು ಹೋಗಿ ಏನೆಲ್ಲಾ ಮಾಡಿದ್ದ ಪೋಲಿ. ಒಂದಲ್ಲ ಎರಡಲ್ಲ ರಾತ್ರಿ ಇಡೀ ಸುರಿದಿತ್ತು ಪ್ರೀತಿಯ ಮಳೆ. ಅದು ಸುಖದ ಪರಾಕಾಷ್ಠೆ. ಆಕ್ಸಿಟೋಸಿನ್ ಹಾರ್ಮೋನ್ ಕುಪ್ಪಳಿಸಿ ಕುಣಿದಿತ್ತು. ಹೊರಡುವ ಮುನ್ನ ಪ್ಲೀಸ್ ಇನ್ನೊಂದೇ ಒಂದ್ಸಲ ಅಂತ ನಾನೇ ಬೇಡಿದ್ದು ನೆನಪಾಗಿ ತಲೆ ಮೊಟಕಿಕೊಂಡಳು.

ಮತ್ತೆ ಫೋನ್. ಮತ್ತೆ ಸ್ವಿಚ್ಡ್ ಆಫ್.

ಅವನಿಲ್ಲದೆ ಅರ್ಧ ದಿನ ಇರಲಿಕ್ಕೆ ಆಗಲ್ವಲ್ಲ ನನ್ನಿಂದ. ಇನ್ನು ಜೀವನ ಪೂರ್ತಿ ಹೇಗಿರಲಿ. ಸಾರಿ ಕಣೋ ಮುದ್ದು ಸಾರಿ ಕಣೋ.

ಕನವರಿಸಿದಳು.

…………………

ಕಾಫಿ ಹಿಡಿದು ಬಂದ ಅಮ್ಮನ ದನಿ ಕೇಳಿ ಮಿಥುನಳ ನಿದ್ರೆ ಹಾರಿಹೋಯ್ತು. ಬೆರಳು ಕಚ್ಚಿಕೊಂಡು ಕೂಡಲೇ ಫೋನ್ ತೆಗೆದು ವಾಟ್ಸ್ಯಾಪ್ನಲ್ಲಿ ಇಣುಕಿದಳು.

ಲವ್ ಯೂ ಕಣೆ ಮುದ್ದು ಅಂತಿತ್ತು.

ಮಿಥುನಳ ದಿಲ್ ಜೀಕಿತು.

                                                                               ರವಿ ಅಜ್ಜೀಪುರ

 

 

Please follow and like us: