ಜಗತ್ತಿನ ಅತಿ ದುಬಾರಿ ಮಾಸ್ಕ್ ನೋಡಿದ್ದೀರಾ? ಅದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

ಅಬ್ಬಬ್ಬಾ ಅಂದ್ರೆ ನೀವು ಒಂದು ಮಾಸ್ಕ್ ಗೆ ಎಷ್ಟು ಹಣ ಕೊಡಬಹುದು?

ಹತ್ತು, ಐವತ್ತು, ನೂರು, ಇನ್ನೂರು. ದುಡ್ಡಿದ್ದವರು ಸಾವಿರ ಗಟ್ಟಲೆ ಕೊಟ್ಟು ಖರೀದಿಸಿದ್ರೂ ಆಶ್ಚರ್ಯವಿಲ್ಲ. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ ರೆಡಿ ಮಾಡಿಸ್ತಿರುವ ಮಾಸ್ಕ್ ನ ಬೆಲೆ ಎಷ್ಟು ಗೊತ್ತಾ?

ಹನ್ನೊಂದು ಕೋಟಿ ಇಪ್ಪತ್ತಮೂರು ಲಕ್ಷ ರೂಪಾಯಿ.

ತಮಾಷೆ ಅಲ್ಲ ಇದು ನಿಜ. ಇಸ್ರೇಲ್ ನ ಒಂದು ಜ್ಯೂವೆಲ್ಲರಿ ಸಂಸ್ಥೆ ಅಮೆರಿಕದ ಒಬ್ಬ ಆಗರ್ಭ ಶ್ರೀಮಂತ ಕಲಾಭಿಮಾನಿಗೆ ಇಷ್ಟು ಕಾಸ್ಟ್ ಲಿ ಬೆಲೆಯ ಮಾಸ್ಕ್ ತಯಾರು ಮಾಡಿ ಕೊಡ್ತಿದೆ. ಇಷ್ಟಕ್ಕೂ ಹನ್ನೊಂದು ಕೋಟಿ ಕೊಡೋ ಅಂಥದ್ದು ಆ ಮಾಸ್ಕ್ ನಲ್ಲಿ ಏನಿದೆ ಅಂತ ತಲೆಕೆಡಿಸಿಕೊಂಡಿದ್ದರೆ ಇಲ್ಲಿ ನೋಡಿ.

ಇಡೀ ಮಾಸ್ಕ್ ಹದಿನೆಂಟು ಕ್ಯಾರೆಟ್ ಗೋಲ್ಡ್ ನಿಂದ ತಯಾರಾಗಿದೆ. ಸುಮಾರು ಮೂರು ಸಾವಿರದ ಆರುನೂರು ಬ್ಲ್ಯಾಕ್ ಅಂಡ್ ವೈಟ್ ಡೈಮಂಡ್ಸ್ ಮಾಸ್ಕ್ ನಲ್ಲಿವೆ. ಜೊತೆಗೆ N99 ಮಾಸ್ಕ್ ಫಿಲ್ಟರ್ ಅಳವಡಿಸಿದ್ದಾರೆ. ಇಪ್ಪತ್ತೈದು ಕುಶಲ ಕರ್ಮಿಗಳು ಹಗಲು ರಾತ್ರಿ ಈ ಮಾಸ್ಕ್ ನ ತಯಾರು ಮಾಡಿದ್ದಾರಂತೆ. ವರ್ಷದ ಕೊನೆಗೆ ಜಗತ್ತಿನ ದುಬಾರಿ ಕೊರೋನ ವೈರಸ್ ಮಾಸ್ಕ್ ಕಸ್ಟಮರ್ ಕೈ ಸೇರಲಿದೆ.

ಸುಮಾರು ಕಾಲು ಕೇಜಿ ತೂಕ ಇರುವ ಮಾಸ್ಕನ್ನ ಆತ ಎಲ್ಲೆಂದರಲ್ಲಿ ಹಾಕೊಂಡು ತಿರುಗಾಡ್ತಾನಾ ಇಲ್ಲ ಶೋಪೀಸ್ ಮಾಡಿ ತನ್ನ ಶ್ರೀಮಂತಿಕೆಯನ್ನ ತೋರಿಸಲು ಇಟ್ಕೊತ್ತಾನಾ?

ಏನು ಮಾಡಿದ್ರೂ ಕಷ್ಟಾನೆ ಅಲ್ವ.

Please follow and like us:
ಜಗತ್ತಿನ ಅತಿ ದುಬಾರಿ ಮಾಸ್ಕ್ ನೋಡಿದ್ದೀರಾ? ಅದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

Leave a Reply