Title

ದೇವರಿದ್ದಾನೆಯೇ!!!?

ಹಸಿವು ಹೈರಾಣಾಗಿಸಿದೆ

ಬಾಯಾರಿಕೆ ಬಳಲಿಸಿ ಬೆಂಡಾಗಿಸಿದೆ

ಹೂದೋಡದಲ್ಲಿ ಹೂವುಗಳು ಕನಲಿವೆ

ಹೂ ಗಿಡಗಳಿಗೆ ನೀರುಣಿಸಿದರೆ

ಗಿಡ ಚಿಗುರಬಹುದು

ಎಲೆಗಳು ನಳನಳಿಸಬಹುದು

ಹೂ ದಳಗಳು ನಗು ಸೂಸಬಹುದು

ಅಂತರಾತ್ಮ ಅಂತರ್ಮುಖಿಯಾಗಿದೆ

ಅದು ತೇವಗೊಂಡಿದೆ

ಅದು ದಣಿದಂತೆ ಕಾಣುತ್ತದೆ

ಅಂತರಂಗದ ಮೃದುಂಗ ಮಿಡಿಯುತ್ತದೆ

ಮುರಿದ ಆತ್ಮಗಳು ಕರುಣ ರಾಗ ಹಾಡುತ್ತವೆ

ಗಾಢಾಂಧಕಾರ ವ್ಯಾಪಿಸುತ್ತದೆ

ಹೂ ಗಿಡಗಳ ಎಲೆಗಳು ಬಾಡುತ್ತವೆ

ಹೂ ದಳಗಳು ಬಳ ಬಳನೆ ಉದುರುತ್ತವೆ

ಜೀವನ ಸಂಗೀತ ಸ್ಥಬ್ದಗೊಳ್ಳುತ್ತದೆ

ಗಿಡಗಳು ಬರಡಾಗುತ್ತವೆ

ಮಾನವತೆ ಸತ್ತು ಹೋಗುತ್ತದೆ

ತರಗೆಲೆಗಳಂತೆ ಹೆಣಗಳು ಉರುಳುತ್ತವೆ

ಬದುಕಲೆಣಿಸುವವರು ಸೋಲುತ್ತಾರೆ

ಸೋತವರು ಸಾಯುತ್ತಾರೆ

ಇನ್ನೊಬ್ಬರೂ ಅನುಸರಿಸುತ್ತಾರೆ

ಬದುಕು ಬಲು ದುರ್ಭರವಾಗುತ್ತದೆ

ಸತ್ತವರ ನಡುವೆ ಬದುಕಿರುವವರಿಗಾಗಿ

ಹುಡುಕಾಟ ನಡೆದು ಅವರ ನಡುವೆ ತಮ್ಮನ್ನೇ

ಕಂಡುಕೊಳ್ಳುತ್ತಾರೆ

ಆ ದೇವಭೂಮಿಯಲ್ಲಿ ದೇವರಿದ್ದಾನೆಯೇ?

ನಾನು ಬಾರಿ ಬಾರಿಗೂ ಯೋಚಿಸುತ್ತೇನೆ

ಆ ಪಾಳುಬಿದ್ದ, ಭಯಾನಕ ಸ್ಥಳದಲ್ಲಿ

ನಿರ್ಜನವಾದ ಮೌನ ಬೀದಿಗಳಲ್ಲಿ

ಕೆನ್ನಾಲಿಗೆ ಚಾಚಿ ಧಗದಗಿಸಿ ಉರಿಯುವ ಬೆಂಕಿಯ

ಬೆಳಕಿನ ನೆರಳಿನಲ್ಲಿ

ಸುಡುವ ಬಿಸಿಲನ್ನು ಉಡಿಯಲ್ಲಿ ಕಟ್ಟಿಕೊಂಡ

ಬಯಲು ಬಂದೀಖಾನೆಯಲ್ಲಿ

ವಿಷವನ್ನು ಸೂಸಿ ಹೋಗುವ ನಿಷ್ಕರುಣಿ ಗಾಳಿಯಲೆಗಳಲ್ಲಿ

ಖಾದರ್ ಮೊಹಿಯೊದ್ದೀನ್. ಕೆ.ಎಸ್

#ಖಾದರ್_ಮೊಹಿಯೊದ್ದೀನ್_ಕೆ_ಎಸ್

More Literatures

" ಬದುಕು ಒಂದು ಕನಸಿನಂತೆ.

ಸ ... Read More

ನೋವು ಕಾಡುವಾಗ

ನೋವು ನುಂಗ ... Read More

.ಅರವಿಂದ ಚೊಕಾಡಿ ಎಂಬ ಮಾರ್ಗದರ್ಶ ... Read More

ದೇವರಿದ್ದಾನೆಯೇ!!!?

ಹಸಿವು ಹೈ ... Read More

ವಿಠ್ಠಲ ಮೂರ್ತಿ ಸರ್,

ಸಾಗರದವ ... Read More