ಮರೆಯಲಿ ಹ್ಯಾಂಗ: ಕನ್ನಡದ ಬಹುತೇಕ ಲೇಖಕರ ಹಾಗೆ ಅವರೂ ಬಡತನದ ಹಿನ್ನೆಲೆಯವರು. ಹೆಚ್ಚಿನ ಕಾಲ ಸಾಹಿತ್ಯದ ಗಂಧವೇ ಇಲ್ಲದ ಪರಿಸರದಲ್ಲಿ ಬೆಳೆದವರು.…
Author: admin
ಯಾವ ನಂಬಿಕೆಯ ಮೇಲೆ ನನ್ನ ಮಗಳನ್ನ ಶಾಲೆಗೆ ಕಳುಹಿಸಲಿ ಹೇಳಿ?
ಡಿಯರ್ ಪೇರೆಂಟ್ಸ್ ತುಂಬಾ ಆತಂಕದಿಂದ ಈ ಪತ್ರ ಬರೆಯುತ್ತಿದ್ದೇನೆ. ಶಾಲೆ ಶುರುವಾಗಬೇಕು ಅಂತ ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರವೂ ಅದೇ…
ನಮ್ಮ ಬದುಕನ್ನ ಸಹ್ಯವನ್ನಾಗಿಸಿದವರನ್ನೆಲ್ಲಾ ನಾವು ಸ್ಮರಿಸಿಕೊಳ್ಳದಿದ್ರೆ ಹೇಗೆ!
ಸಂಜೆ ಕತ್ತಲಾಗ್ತಿದ್ದಹಾಗೆ ಫಟ್ ಅಂತ ಸ್ವಿಚ್ ಆನ್ ಮಾಡ್ತೀವಿ. ಬಗ್ಗನೆ ಬಲ್ಬ್ ಹೊತ್ತಿಕೊಳ್ಳುತ್ತೆ. ಕತ್ತಲು ದೂರಾಗಿ ಇಡೀ ಮನೆ ಬೆಳಗುತ್ತದೆ. ಥಾಮಸ್…
ಸಿಡಸಿಡ ಬೈದು ಬಂದವಳ ಎದೆಯಲ್ಲಿ ಬಾಯ್ ಫ್ರೆಂಡ್ ನ ರೊಮ್ಯಾಂಟಿಕ್ ನೆನಪು
ನಿನಗೆ ತಲೆ ಸರಿಯಿಲ್ಲ. ನೀನೊಬ್ಬ ಶುದ್ಧ ಈಡಿಯೆಟ್. ಒಂದು ಹೆಣ್ಣನ್ನ ಹೇಗೆ ಸಂಭಾಳಿಸಬೇಕು ಅನ್ನೋ ಮಿನಿಮಮ್ ಸೆನ್ಸ್ ಗೊತ್ತಿಲ್ಲ. ನಿನ್ನಂಥವನ ಜೊತೆ…
ಗೊತ್ತಿರಲಿ.. ಮನೆ ಎಂಬುದು ಡಸ್ಟ್ ಬಿನ್ ಅಲ್ಲ!
ಕೆಲವರಿಗೆ ಮನೆ ಮನಸ್ಸಿನಂತೆ. ಸುಂದರ, ಸ್ವಚ್ಛ ಅಹ್ಲಾದಕರ ತಾಣ. ಕೆಲವರಿಗಂತೂ ಜಸ್ಟ್ ಲೈಕ್ ಅ ಗೋಡೌನ್. ಬೇಕಾದ್ರೆ ಗಮನಿಸಿ. ಕೆಲವರಿಗೆ ಕೆಲವೊಂದು…
ಎಷ್ಟು ಕಾಲ ಅರ್ಧ ಖುಷಿಯಲ್ಲೇ ನರಳುತ್ತೀರಾ?
ಯಾವುದೂ ಅಸಾಧ್ಯವಲ್ಲ -2 ಯಾರು ಫುಲ್ ಸಂತೋಷವಾಗಿದ್ದೀರ? ಇಲ್ವೇ ಇಲ್ವೇನೋ ಅನ್ನುವಷ್ಟರ ಮಟ್ಟಿಗೆ ಎಲ್ರೂ ಅರ್ಧ ಸಂತೋಷಿಗಳೆ. ಅರ್ಧ ಸುಖಿಗಳೆ. ಇಡೀ…
ಅಲಾರಾಂ ಹೊಡ್ಕೊಳುತ್ತೆ. ಅದರ ತಲೆ ಮೇಲೆ ಮೊಟಕಿ ಮುಖದ ತುಂಬಾ ಬೆಡ್ ಶೀಟ್ ಹೊದ್ಕೊಂಡು ಎಕ್ಸ್ ಟ್ರಾ ಇನ್ನೆರಡು ಗಂಟೆ ಗಡದ್ದಾಗಿ ನಿದ್ರೆ ಹೊಡಿತೀರ. ಆಮೇಲೂ ಏಳೋದಕ್ಕೆ ಮನಸಾಗಲ್ಲ. ಇನ್ನೊಂದರ್ಧ ಗಂಟೆ ಸೂಪರ್ ಎಕ್ಸ್ ಟ್ರಾ ನಿದ್ರೆ. ಅಲ್ಲಿಗೆ ಸೂರ್ಯ ಹುಟ್ಟಿ ಅಲ್ಮೋಸ್ಟ್ ಮೂರು ಗಂಟೆ ಆಗಿರುತ್ತೆ.
ಇಷ್ಟಾದ್ರೂ ನಿದ್ರೆ ಸಾಕಾ?
ಎಲ್ಲಿ ಸಾಕು. ನಿದ್ರೆ ವಿಷಯದಲ್ಲಿ ಸಾಕು ಅನ್ನೋರು ಸಾಕಷ್ಟಿಲ್ಲ. ಬೇಕು ಅನ್ನೋರೆ ಜಾಸ್ತಿ. ಅದೊಂದು ಸುಖದ ಗ್ರಾಫ್ ನ ಯಾರೂ ಕಡಿಮೆ ಮಾಡ್ಕೊಳ್ಳಲು ಒಪ್ಪಲ್ಲ. ಆದ್ರೆ ಗೊತ್ತಿರಲಿ, ಅತಿಯಾದ ನಿದ್ರಾ ಸುಖವೂ ಸಖತ್ ಡೇಂಜರ್ ಅಂತಿದ್ದಾರೆ ಸೈಂಟಿಸ್ಟ್.
ಯೂನಿವರ್ಸಿಟಿ ಆಫ್ ಸಿಡ್ನಿಯವರು ಅತಿಯಾಗಿ ನಿದ್ರೆ ಮಾಡುವವರ ಬಗ್ಗೆ ಒಂದು ಸ್ಟಡಿ ಮಾಡಿದ್ರು. ಆ ಸ್ಟಡಿ ಪ್ರಕಾರ, ಯಾರು ಒಂಭತ್ತು ಗಂಟೆಗಿಂತ ಹೆಚ್ಚು ನಿದ್ರೆ ಮಾಡ್ತಾರೋ ಅವರಿಗೆ ಅವಧಿಗೂ ಮುನ್ನವೇ ಸಾವು ಬರುತ್ತಂತೆ. ಅದ್ರಲ್ಲೂ ತಿನ್ನೋದು ಬಿದ್ದುಕೊಂಡೇ ಇರೋದು, ಮದ್ಯಪಾನ ಮಾಡೋದು, ದೇಹಕ್ಕೆ ವ್ಯಾಯಾಮವೇ ಇಲ್ಲದೆ ಕೂತಿರ್ತಾರಲ್ಲಾ ಅವರಿಗಂತೂ ರಿಸ್ಕ್ ಫ್ಯಾಕ್ಟರ್ಸ್ ಜಾಸ್ತಿಯಂತೆ.
ನ್ಯಾಷನಲ್ ಸ್ಲೀಪ್ ಫೌಂಡೇಷನ್ ರಿಕಮಂಡ್ ಮಾಡಿರೋ ಪ್ರಕಾರ ವಯಸ್ಕರು ದಿನದಲ್ಲಿ ಏಳು ಗಂಟೆ ನಿದ್ರೆ ಮಾಡಿದ್ರೆ ಸಾಕು. ಅದ್ರಲ್ಲೂ ಎಷ್ಟು ಗಂಟೆ ನಿದ್ರೆ ಮಾಡಿದ್ವಿ ಅನ್ನೋದು ಮುಖ್ಯವಲ್ಲ. ಎಷ್ಟು ಗಾಢ ನಿದ್ರೆ ಮಾಡಿದ್ರಿ ಅನ್ನೋದು ಮುಖ್ಯ. ಆದ್ರೆ ಕೆಲವರು ಒಂದು ಆಲಸ್ಯ ಬೆಳೆಸ್ಕೊಂಡಿರ್ತಾರೆ. ಯಾವಾಗ್ಲೂ ಬೆಡ್ ಮೇಲೆ ಬಿದ್ಕೊಂಡೇ ಇರ್ತಾರೆ. ಅಂಥವರಿಗೆ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಬರಬಹುದು. ಸಡನ್ ಡೆತ್ ಕೂಡ ಬರಬಹುದು ಅಂತಾರೆ ಮೆಡಿಕಲ್ ಎಕ್ಸ್ ಪರ್ಟ್ಸ್.
ಅತಿಯಾದ್ರೆ ಅಮೃತವೂ ವಿಷ ಅಂತಾರಲ್ಲ ಅದು ನಿದ್ರೆಗೂ ಅನ್ವಯಿಸುತ್ತೆ.
ಭಯವೇಕೆ? ಹೊಸಬೆಳಕಿನ ಕಿರಣವೊಂದು ನಮಗಾಗಿ ಸ್ವಾಗತಿಸುತ್ತದೆ!
ಮಿಲಿಯನ್ ಗಟ್ಟಲೆ ವರ್ಷಗಳಿಂದ ಈ ಭೂಮಿಯ ಮೇಲೆ ಏನೆಲ್ಲ ಸಂಭವಿಸಿತೋ ಇಂದಿನವರೆಗೂ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿತ್ತು, ಹಾಗಿತ್ತು, ಏನೋ…