ಎಷ್ಟೊಂದು ನೈಜತೆ!

ಲಾಸ್ಟ್ ಪೇಜ್

ವಾವ್…! ಈ ಚಿತ್ರಗಳು ಎಷ್ಟು ರಿಯಲಿಸ್ಟಿಕ್ ಆಗಿವೆ ಅಲ್ವಾ? ಯಾವ ಡಿಜಿಟಲ್ ಕೆಮೆರಾದಲ್ಲಿ ಫೊಟೋ ತೆಗೆಯಲಾಗಿದೆಯೋ ಏನೋ ಅಂತ ಅಂದ್ಕೊಳ್ತಿದ್ದೀರಾ? ಯು ಆರ್ ರಾಂಗ್!
ಅಸಲಿಗೆ ಇವು ಜೀವಂತ ಚಿತ್ರಗಳ ಫೊಟೋಗಳಲ್ಲ. ಮರದಿಂದ ಕೆತ್ತಿದ ಶಿಲ್ಪದ ಫೊಟೋಗಳು. ನಿಜವಾದದ್ದೇನೋ ಅನ್ನುವಷ್ಟು ನೈಜವಾಗಿವೆ.
ಅಂದಹಾಗೆ ಈ ನೈಜ ಕೆತ್ತನೆಯ ಹಿಂದೆ ಗೆರಾರ್ಡ್‌ ಮಾಸ್ ಎಂಬ ಸ್ಪೇನ್ ಕಲಾವಿದನ ಕೈಚಳಕವಿದೆ. ಗೆರಾರ್ಡ್‌ ಮರದ ಶಿಲ್ಪದಲ್ಲಿ ಎಷ್ಟು ನೈಜತೆ ತುಂಬುತ್ತಾನೆ ಅಂದ್ರೆ ಈ ನಾಯಿಯನ್ನು ನೋಡಿ, ಮೇಲ್ನೋಟಕ್ಕೆ ಇದೊಂದು ಕೆತ್ತನೆ ಅಂತ ಅನ್ನಿಸೋದೆ ಇಲ್ಲ. ಇಲ್ಲೊಂದು ವಿಶೇಷತೆ ಇದೆ. ಅದೇನೆಂದರೆ, ಗೆರಾರ್ಡ್‌ ಮಾಸ್ ನಾಯಿಯ ಕೆತ್ತನೆಗೆ ಎಲ್ಲೆಲ್ಲಿ ಅಗತ್ಯತೆ ಇದೆಯೋ ಅಲ್ಲೆಲ್ಲಾ ಬೆಂಕಿಯ ಸ್ಪರ್ಶ ನೀಡಿದ್ದಾನೆ. ಅದರ ಪರಿಣಾಮ ಕೆತ್ತನೆಗಳು ಇನ್ನಷ್ಟು ನೈಜವಾಗಿ ಕಾಣುತ್ತಿವೆ.
ಬೆಕ್ಕು, ನಾಯಿಗಳಷ್ಟೇ ಅಲ್ಲದೆ ರೆನಾಯ್ಸಾನ್ಸ್ ಎರಾ ಅಂದರೆ ನವೋದಯ ಯುಗಕ್ಕೆ ಸಂಬಂಧಿಸಿದ ಅನೇಕ ಕೆತ್ತನೆಗಳನ್ನು ಈತ ಮಾಡಿದ್ದಾನೆ. ಅವುಗಳನ್ನು ಸುಮ್ಮನೆ ಕೆತ್ತಿ ನಿಲ್ಲಿಸದೆ ಬಣ್ಣಗಳನ್ನು ತುಂಬಿದ್ದಾನೆ. ಹೀಗಾಗಿ ಇವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ಇವಿಷ್ಟೇ ಅಲ್ಲ, ಈತನದ್ದೊಂದು ಎಕ್ಸಿಬಿಷನ್ ಇದೆ. ಕಲ್ಲಿನಿಂದ, ಅಮೃತಶಿಲೆಯಿಂದ, ಅಲಬಾಸ್ಟರ್ ಎಂಬ ಮೃದುವಾದ ಕಲ್ಲಿನಿಂದ ಕೆತ್ತಿರುವ ಶಿಲೆಗಳನ್ನು ಅಲ್ಲಿ ಕಾಣಬಹುದಾಗಿದೆ.
ಕಲಾವಿದನಾದವನಿಗೆ ಆಸಕ್ತಿಯ ಜೊತೆಗೆ ಕ್ರಿಯೇಟಿವಿಟಿ, ತಾಳ್ಮೆ, ತಾದಾತ್ಮ್ಯತೆ ಇರಬೇಕಾಗುತ್ತದೆ ಎಂಬ ಮಾತಿಗೆ ಗೆರಾರ್ಡ್‌ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾನೆ.
ನಿಮಗೂ ಇಂತಹ ಆಸಕ್ತಿ ಇದ್ಯಾ? ಮೊದಲು ಚಿಕ್ಕ ಚಿಕ್ಕ ಕ್ರಾಫ್ಟ್ ಗಳನ್ನು, ಡ್ರಾಯಿಂಗ್‌ಗಳನ್ನು ಮಾಡ್ತಾ ಹೋಗಿ. ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಕಲಾವಿದರಾಗಿ ಬೆಳೆಯಬಹುದು.
ಜಸ್ಟ್ ಟ್ರೈ ಇಟ್.

ಟೇಸ್ಟ್‌ನಲ್ಲಿ ಅವರೇ ಮುಂದು!

ಹುಡುಗಿಯರ ಟೇಸ್ಟ್ ಚೆನ್ನಾಗಿರುತ್ತೆ, ಡಿಫರೆಂಟ್ ಆಗಿರುತ್ತೆ ಅನ್ನೋದು ಜಗತ್ತಿಗೆ ಗೊತ್ತಿರೋ ವಿಷ್ಯ. ಅದರಲ್ಲಿ ಸರ್‌ಪ್ರೈಸ್ ಏನೂ ಇಲ್ಲ. ಆದ್ರೆ ರುಚಿಯನ್ನ ಕಂಡು…

ಸ್ವಚ್ಛ ತಂತ್ರಕ್ಕೆ ಕಲಾವಿದರ ಸಾಥ್

ಇನ್ನೇನು ಎರಡೇ ದಿನಕ್ಕೆ ಸ್ವಾತಂತ್ರೊ್ಯೀ ತ್ಸವ ಬಂದು ಬಿಟ್ಟಿತು. ಸ್ವತಂತ್ರ ಸಿಕ್ಕು ಏಳು ದಶಕಗಳು ಕಳೆದಿದ್ದರೂ ಸ್ವಚ್ಛತೆ ಮಾತ್ರ ಕಾಣೆಯಾಗಿದೆ ಎಂಬ…