ಬಾಯ್ ಫ್ರೆಂಡ್ ಇಲ್ದೆ ಇದ್ರೆ  ಬದುಕೋದಕ್ಕಾಗಲ್ವಾ? 

ಬಾಯ್ ಫ್ರೆಂಡ್ ಇಲ್ದೆ ಇದ್ರೆ  ಬದುಕೋದಕ್ಕಾಗಲ್ವಾ? 

ಈ ಸುಖಕ್ಕೆ ಯಾಕೆ ಬೇಕು ಲವ್ವುಗಿವ್ವು ಎಲ್ಲಾ ಅಲ್ವ!

ಈ ಹುಡುಗರು ಸ್ವಲ್ಪ ಚೈಲ್ಡಿಶ್ ಅನಿಸಿಕೊಂಡಿದ್ದಾಗಲೇ ಮನೆ ಬಿಟ್ಟು ಓಡಿ ಬಂದಿದ್ದ ಇಬ್ಬರು ಪ್ರೇಮಿಗಳಿಗೆ ನಾವು ಮದುವೆ ಮಾಡಿಸಿದ್ವಿ. ಎಲ್ಲಾ ಹತ್ತು…

ಅಪ್ರೋಚ್ ಹೇಗಿರಬೇಕು?

ಅಪ್ರೋಚ್ ಹೇಗಿರಬೇಕು? ಅಪ್ರೋಚ್ ಬಹುತೇಕರಿಗೆ ಬಹು ದೊಡ್ಡ ಚಾಲೆಂಜ್. ಕೆಲವರಿಗೆ ನೀರು ಕುಡಿದಷ್ಟೇ ಸಲೀಸು. ಇನ್ನೂ ಕೆಲವರಿರುತ್ತಾರೆ ಅವರಿಗೆ ಅಪ್ರೋಚ್ ಅಂದ್ರೇನೆ…

ಬದುಕು ಬಣ್ಣಗಳ ಸಂತೆ

ಆಕೆ ಮಾತಿನ ಕೊನೆಗೊಮ್ಮೆ ವಿಶ್ವಾಸಪೂರ್ವಕವಾಗಿ ನಗುವಿನ ಎಮೋಜಿ ಬಿಸಾಕಿ ಎದ್ದೋಗಿರುತ್ತಾಳೆ. ಇತ್ತ ಖಾಲಿ ಕೂತು ದಿನಕ್ಕೆ ನಾಲ್ಕು ಸಿಮ್ ಮ್ಯಾನೇಜ್ ಮಾಡುವ, ಕೆಲಸವಂತೂ ಮೊದಲೇ ಮಾಡದ ಸೋಮಾರಿ ಕಟ್ಟೆ ಸಿದ್ಧನಿಗೆ ಅಷ್ಟೇ ಸಾಕಾಗುತ್ತದೆ. ಆಕೆ ಸುಮ್ಮನೆ ನಗುವ ಎಮೋಜಿ ಯಾಕೆ ಹಾಕಿದಳು..?

santhosh kumar mehendale

ಎಮೋಜಿಗೊಂದು ಡಿಕ್ಷನರಿ ಬೇಕಿತ್ತಾ?

..ಸುಮ್ನೆ ಚೆಂದದ ಫೀಲಿಂಗ್ ಅಂತಾ ಹೇಳೋಕಾಗಲ್ಲ ಅಂತ ಒಂದು ಎಮೋಜಿ ಹಾಕಿದ್ದೆ, ಪುಣ್ಯಾತ್ಮ ಅದನ್ನೇ ಹಿಡ್ಕೊಂಡು ಕೂತಿದಾನೆ. ಇವ್ರಿಗೆ ಬೇರೆ ಅರ್ಥಾನೇ ಆಗೋದಿಲ್ವಾ..? ಆ ಸುಡುಗಾಡು ಸ್ಮೈಲಿಗಳೋ. ಯಾವುದಕ್ಕೆ ಯಾವುದು ಅಂತ ಅರ್ಥ ಮಾಡ್ಕೊಳ್ಳೊಕ್ಕೆ ಎರಡು ತಿಂಗಳು ಬೇಕಾದೀತು. ಅದೆಲ್ಲಾ ಯಾವನು ಮಾಡ್ತಾನೆ..? ಏನೋ ಅಫೇಕ್ಷನೇಟ್ ಅನ್ಸೋ ಒಂದೆರಡು ಸ್ಮೈಲಿ ನಾರ್ಮಲ್ ಆಗಿ ಯೂಸ್ ಮಾಡ್ತೀವಿ. ಅದರ ಮೀನಿಂಗ್ ಹಿಂಗೆ, ನಿಮಗೂ ಏನೋ ಫೀಲಿಂಗ್ ಇರ್ಬಹುದು ಅಂತ ಅನ್ಕೊಂಡೆ ಅಂತಾ ದಿನಕ್ಕೆ ಹತ್ತಾರು ಬಾರಿ ಇನ್‌ಬಾಕ್ಸ್‌ಗೆ ಆಡಿಕೊಳ್ಳುತ್ತಿರುತ್ತಾರಲ್ಲ ಇವರಿಗೆಲ್ಲ ನಾರ್ಮಲ್ ಟಾಕ್ ಅನ್ನೋದೇ ಇರೋದಿಲ್ವಾ..?

ಅವಳು ಎಗಾದಿಗಾ ಮಾತಾಡುತ್ತಿದ್ದರೆ, ನನಗೆ ಅಪಾರ ದಿಗಿಲಾಗುತ್ತಿತ್ತು ಎನ್ನುವುದಕ್ಕಿಂತ ಇದು ಯಾವುದೋ ಬರಕತ್ತಾಗದ ಕಾಳುಕೇಸು. ಬೆಳ್‌ಬೆಳಿಗ್ಗೆ ಇವಳ ಕೈಗೆ ತಗುಲಿಕೊಂಡಿದೆ ಎನ್ನುವುದು ಮಾತ್ರ ಪಕ್ಕಾ ಆಗಿತ್ತು. ಸಾಮಾಜಿಕ ಜಾಲತಾಣ ಬಂದ ಮೇಲೆ ಪ್ರತಿಯೊಬ್ಬರೂ ಸೆಲೆಬ್ರಿಟಿಗಳೆ. ಅಂಗೈಯಲ್ಲಿ ಬ್ರಹ್ಮಾಂಡ ಇಟ್ಟುಕೊಂಡು ಇದು ವಿಷಯ ಗೊತ್ತಾಯಿತಾ ಎಂದೇನಾದರೂ ಮಾತುಕತೆ ನಡೆಯುತ್ತಿದ್ದರೆ ಅಲ್ಲೇ ಗೂಗಲಿಸಿ ಎರಡ್ಮೂರು ಪ್ಯಾರಾಗ್ರಾಫ್ ಓದಿಕೊಂಡು ಅಪರ ಬ್ರಹ್ಮನ ಅಪರಾವತಾರ ಎನ್ನುವಂತೆ ಅದಾ ವಿಷ್ಯಾ.. ನನಗೆ ಮೊದಲೇ ಇಷ್ಟೆಲ್ಲ ಗೊತ್ತಿತ್ತು. ಯಾಕಿದೆಲ್ಲಾ ಅಂತ ಸುಮ್ಮನಿದ್ದೆ ಎನ್ನುವ ಬೃಹಸ್ಪತಿಗಳ ಸಂಖ್ಯೆನೂ ಕಡಿಮೆ ಇಲ್ಲ. ಹಾಗೆ ಮಾತು ಬೆಳೆದು ಯಾವುದೋ ವಿಷಯ, ಇನ್ಯಾರದ್ದೋ ಹಗರಣ, ಮತ್ತೊಬ್ಬನ ದೇಶಪ್ರೇಮ, ಅವಳ್ಯಾರೋ ಕಾಲು ಕೆದರಿಕೊಂಡು ವಾಲ್ ಮೇಲೆ ಎಗರುವ ರಂಪಗಳು ಹೀಗೆ ಹತ್ತು ಹಲವು ಚರ್ಚೆ ಕೊನೆಯಾಗುವುದು ಒಂದೆರಡು ಸ್ಮೈಲಿ ಹಾಗು ಇನ್ನೊಂಚೂರು ಮುಂದುವರೆದರೆ, ಮೂರನೆ ಲೈನ್ ಸ್ಮೈಲಿಗಳೊಂದಿಗೆ. ಅದು ಅಭ್ಯಾಸವಾಗಿ ಹೋದಾಗ ಯಾರೊಬ್ಬರು ಚರ್ಚೆ ಮಾಡುವಾಗಲೂ ಅಲ್ಲೊಂದಿಲ್ಲೊಂದು ಎಮೋಜಿ ಬಳಸೋದು ಸಹಜ. ಅದರ್ಲೊಂದೆರಡು ಲವ್ ಸಿಂಬಲ್ ಇರುವ ಕಾಳಜಿ ತೋರಿಸುವ, ಇದ್ದುದರಲ್ಲಿ ಆಪ್ತ ಎನ್ನಿಸುವ ಎಮೋಜಿ ಬಿದ್ದು ಹೋಗುತ್ತದಲ್ಲ ಆಗ ನೋಡಿ ಆ ಕಡೆಯವನ ತಲುಬು ಎದ್ದು ನಿಲ್ಲುತ್ತದೆ. ಇತ್ತ ಈಕೆ ತತ್ತರಿಸುತ್ತಾಳೆ.

ನೀವೆ ಲವ್ ಸಿಂಬಲ್ ಇರೋ ಎಮೋಜಿ ಹಾಕಿದ್ರಲ್ಲ. ಮಾಡೋದೆಲ್ಲ ಮಾಡ್ತಿರಿ ಆಮೇಲೆ ಗಂಡಸರ ಮೇಲೆ ಗೂಬೆ ಕೂರಿಸ್ತೀರಿ ಎನ್ನುವ ಹಂತಕ್ಕೆ ಬಂದು ನಿಲ್ಲುತ್ತದೆ ಅಥವಾ ಇನ್‌ಬಾಕ್ಸ್‌ಗೆ ನಿರಂತರ ಹಾವಳಿ ಆರಂಭವಾಗುತ್ತದೆ. ಅಷ್ಟಕ್ಕೂ ಯಾವ ಮಾತುಕತೆ ಇಲ್ಲದೇನೆ ಸುಬಗರ ತರಹ ಇನ್‌ಬಾಕ್ಸ್‌ಲಿ ಮೇಡಂ, ಎನ್ನುತ್ತಲೇ ತಗುಲಿಕೊಳ್ಳುವ ಆ ಮೂಲಕ ಒಂದಷ್ಟು ದೇಶಾವರಿ ಹಲ್ಕಿರಿತದ ನಂತರ ನಿಧಾನಕ್ಕೆ ವಿಷಯಗಳನ್ನು ಕೆದರುತ್ತಾ ಆಪ್ತವಾಗಲೆತ್ನಿಸುವ ಸುಬಗರಿಗೇನೂ ಕಮ್ಮಿ ಇಲ್ಲ. ಅವರದ್ದೂ ಇದೇ ಹಣೆಬರಹ. ಎಮೋಜಿಗಳನ್ನೆ ಬಳಸಿ ಬಳಸಿ ತಲೆ ಕೆಡಿಸಿಕೊಳ್ಳೋದು.

ಮಾತು ಕಡಿಮೆ, ಸಿಂಬಲ್ ಜಾಸ್ತಿ, ಅರ್ಥ ಮಾತ್ರ ಅಪಾರ ಎನ್ನುವ ಕಾನ್ಸೆಪ್ಟ್ ಇಣುಕಿದ್ದೇ ಕೈಗೊಂದೊಂದು ಮೊಬೈಲ್ ಎಂಬ ಮಾಯಾ ಪರದೆ ದಾಂಗುಡಿ ಇಟ್ಟಾಗ. ಬರೀ ಭಾಷೆಯ ಹಂಗಿಗೆ ಪಕ್ಕಾಗಿದ್ದಾಗ, ಮೊದಲು ಪೂರ್ತಿ ಶಬ್ದಗಳು ಅಕ್ಷರಗಳಾಗಿ ಅಬ್ರಿವೇಶನ್‌ಗಳಾದವು. ಇದೆಲ್ಲಾ ಸಾಲೋಲ್ಲ ಎಂದಾದಾಗ ಅಕ್ಷರಗಳ ಜೊತೆಗೆ ಸೇರಿಕೊಂಡ ಚಿಹ್ನೆಗಳೆ ಎಮೋಜಿಗಳು. ಮೊದಲೆಲ್ಲ ಬರೆಯುತ್ತಿದ್ದ ಪತ್ರದ ಕೊನೆಯಲ್ಲಿ ಮನೆಗಾದರೆ ದೇವರ ಚಿತ್ರ, ಸ್ನೇಹಿತನಿಗಾದರೆ ಎನಾದರೊಂದು ಇದ್ದೀತು ಇಲ್ಲ ಅದೂ ಇಲ್ಲ, ಅಕ್ಕ/ತಮ್ಮನಿಗಿಷ್ಟು ಅಕ್ಕರೆಯ ಕುರುಹುಗಳು, ಹುಡುಗಿಗಾದರೆ (ಬರೆಯುವ ಧೈರ್ಯ ಇದ್ದಿದ್ದರೆ ಪಕ್ಕ ಕೆಂಗುಲಾಬಿ)ಹೀಗೆ ಹಿಂದೆಲ್ಲ ಪತ್ರದ ಕೊನೆಯ ತುದಿಗೆ, ಮತ್ತು ಮೊದಲ ಮೇಲ್ಭಾಗಕ್ಕೆ ಬಳಸುತ್ತಿದ್ದ ಓಂ, ಸ್ವಸ್ತಿಕ್, ಹೂವು ಇತ್ಯಾದಿಗಳ ಪಳೆಯುಳಿಕೆಯ ಹೊಸ ಕಾನ್ಸೆಪ್ಟೆ ಎಮೋಜಿ.

ಆಕೆ ಮಾತಿನ ಕೊನೆಗೊಮ್ಮೆ ವಿಶ್ವಾಸಪೂರ್ವಕವಾಗಿ ನಗುವಿನ ಎಮೋಜಿ ಬಿಸಾಕಿ ಎದ್ದೋಗಿರುತ್ತಾಳೆ. ಇತ್ತ ಖಾಲಿ ಕೂತು ದಿನಕ್ಕೆ ನಾಲ್ಕು ಸಿಮ್ ಮ್ಯಾನೇಜ್ ಮಾಡುವ, ಕೆಲಸವಂತೂ ಮೊದಲೇ ಮಾಡದ ಸೋಮಾರಿ ಕಟ್ಟೆ ಸಿದ್ಧನಿಗೆ ಅಷ್ಟೇ ಸಾಕಾಗುತ್ತದೆ. ಆಕೆ ಸುಮ್ಮನೆ ನಗುವ ಎಮೋಜಿ ಯಾಕೆ ಹಾಕಿದಳು..? ಒಂದು ಸಲಿಗೆಯ ಚಿಹ್ನೆ ನಗು ಅಲ್ವಾ. ಇವನು ಎರಡು ಎಮೋಜಿ ಜೊತೆಗೆ ಒಂದು ಕೆಂಪು ಗುಲಾಬಿಯದ್ದನ್ನು ಸೇರಿಸಿ ದಬಕ್ಕನೆ ಸೆಂಡ್ ಮಾಡಿ ಕೂತುಕೊಳ್ಳುತ್ತಾನೆ. ಅದವತ್ತೇ ಅಲ್ಲದಿದ್ದರೂ ಇನ್ಯಾವಾಗಲೋ ಆಕೆ ನೋಡಿದ ತಪ್ಪಿಗೆ, ಯಾವ ಮಹತ್ವ ಇಲ್ಲದ ಇನ್ನೊಂದು ಸ್ಮೈಲಿ ಹಾಕಿ ಥ್ಯಾಂಕ್ಯೂ ಬೇರೆ ಸೇರಿಸಿಬಿಟ್ಟಿರುತ್ತಾಳೆ. ಹೀಗೆಯೇ ತಪ್ಪಿ ಕಣ್ಣು ಹೊಡೆವ ಸ್ಮೈಲಿ ಬಂದ ಕೂಡಲೇ ಇವನು ಎರಡು ಸರ್ತಿ ಅದನ್ನೆ ತಳ್ಳಿ. ಅದರ ಜೊತೆಗೆ ಒಂದು ಹಾರ್ಟ್ ಇರುವ ಲವ್ಲೀ ಸೇರಿಸಿ, ಇನ್ಯಾರೋ ತಪ್ಪಿ ನಾಚಿಕೆಯ, ಬಾಯಿ ಮುಚ್ಚಿಕೊಂಡ ಸ್ಮೈಲಿಗೆ ಓಹೋ ಈಕೆಗೆ ಮನಸ್ಲೇನೋ ಇದ್ದಿರಬಹುದಾ? ಅದಕ್ಕೆ ಸ್ವಲ್ಪೇ ನಾಚಿಕೊಂಡಿದಾಳೆ ಎಂದು ಮನದಲ್ಲಿ ಮಂಡಿಗೆ ತಿನ್ನುತ್ತಾ, ಅದಕ್ಕೂ ನಂತರ ಇನ್ನೊಂದು ಕಣ್ಣು ಹೊಡೆವ, ಸ್ವಲ್ಪ ಹುಬ್ಬು ಹಾರಿಸಿ ಅಣಕಿಸುವ, ತುಂಟಾಟದ ಎಮೋಜಿ ಜೊತೆಗೊಂದು ಹಾರ್ಟು ಸೇರಿಸಿ ಒಟ್ಟಾರೆ ಆಕೆಯ ಚರ್ಚೆ ಅಥವಾ ಸಂವಹನ ಹಾದಿ ತಪ್ಪಿಸುವ ಕೆಲಸಕ್ಕೆ ನಿಂತುಬಿಡುತ್ತಾನೆ. ಅದವಳಿಗೆ ಗೊತ್ತಾಗಿ,

..ಅಯ್ಯೋ ಕರ್ಮವೇ.. ಎಂದು ಒಂದೋ ಅವನನ್ನು ಬ್ಲಾಕ್ ಮಾಡಿ ಬಿಸಾಕಬೇಕು, ಇಲ್ಲ ಪೂರ್ತಿ ಶೇಪು ಬಿಡಿಸಬೇಕು. ಆದರೆ ಹೆಚ್ಚಿನವರಿಗೆ ಅದರಲ್ಲಿ ಆಸಕ್ತಿ ಮತ್ತು ಕುತೂಹಲ ಎರಡೂ ಇರುವುದಿಲ್ಲವಲ್ಲ ಸುಮ್ಮನಿದ್ದು ಬಿಡುತ್ತಾರೆ. ಅದನ್ನು ನೋಡುತ್ತಲೇ;

..ಒಹೋ ಇವಳು ಸೈಲಂಟ್ ಆಗಿದಾಳೆ ಎಂದರೆ ನಾನು ಹಾಕಿದ ಸ್ಮೈಲಿ ಓ.ಕೆ. ಅಂತಿರಬೇಕು ಬಹುಶ: ರಿಪ್ಲೈ ಮಾಡೋಕೆ ಮುಜುಗರ. ಅದಕ್ಕೆ ಏನೂ ಹಾಕ್ತಿಲ್ಲ. ಇರ್ಲಿ ಮತ್ತೊಮ್ಮೆ ಇನ್ನೂ ನೈಸಾಗಿ ಟ್ರೈ ಮಾಡೋಣ.. ಎನ್ನುತ್ತ ಮತ್ತೊಂದು ಸುತ್ತಿನ ಎಮೋಜಿಗಳ ದಂಡಯಾತ್ರೆ ಶುರು ಮಾಡುತ್ತಾನೆ. ಹೆಚ್ಚಿಗೆ ಕೇಳಿದರೆ ಹೇಗಿದ್ದರೂ ಅದೆಲ್ಲಾ ಅಲ್ಲೇ ಇರುವ ಎಮೋಜಿ ಅಲ್ವಾ ನಾನೇನು ಬೇಕೆಂದೇ ಎನೂ ಅಶ್ಲೀಲ ಕಳಿಸಿದ್ನಾ.. ಇತ್ಯಾದಿ ಅಲಿಬಿ ಮೊದಲೇ ರೆಡಿ ಇರುತ್ತದೆ. ಇವಳಿಗೂ ಯಾರೋ ಒಬ್ಬಾತ ಸುಬಗ ರೂಪಿ, ಕೆಲಸ ಇಲ್ಲದ ಉಪದ್ಯಾಪಿ ಹಾಗೇಯೆ ಸ್ಮೈಲಿ ದಂಡಯಾತ್ರೆ ಶುರು ಮಾಡಿದ್ದ ಅನ್ಸುತ್ತೆ. ಆವತ್ತು ಬಂದವಳೇ ಶುರುವಿಟ್ಟುಕೊಂಡಿದ್ದಳು. 

..ಆದರೆ ಈ ಎಮೋಜಿ ಬಂದಿದ್ದೇ ಬಂದಿದ್ದು ನಮ್ಮ ಮಾತಿನ ಅರ್ಥ ನಮಗೇ ಗೊತ್ತಾಗದಂತೆ ತಿರುಗಿಸಿ ಬಿಡ್ತಾರೆ ಮಾರಾಯ. ಎಂತೆಂಥಾ ಭಾನಗಡಿ ಆಗ್ತಿದೆ ಗೊತ್ತಾ ಈ ಎಮೋಜಿಯಿಂದ, ಯಾಕಾದರೂ ಇನ್ ಬಾಕ್ಸ್‌ಲಿ ಬಿಟ್ಕೊಂಡೆ ಅಂತಾಗಿದೆ ನೋಡು. ತಮಗೆ ಬೇಕಾದಂತೆ ಅರ್ಥೈಸಿಕೊಂಡು ಬಿಡ್ತಾರೆ ನೋಡು..  ಆಕೆ ಕಳೆದ ಕ್ಷಣಗಳ ಹೀಟ್‌ನ್ನು ಕಕ್ಕುವ ತವಕದಲ್ಲಿದ್ದಳು. ಎದುರಿಗೆ ನಾನು ಸಿಕ್ಕಿದ ಕಾರಣ ಹೀಗೆ ಎಮೋಜಿ ಮೂಲಕ ಪರೋಕ್ಷವಾಗಿ ವಾಂಛೆಯನ್ನು, ಅಪೇಕ್ಷೆಯನ್ನು ಹೊರಗಿಟ್ಟು ಅದರಲ್ಲೇ ಅರ್ಥ ಹುಡುಕಿ ಕಾಳು ಹಾಕುವ ಸುಬಗರ ದಂಡಿಗೆ ಆಕೆಯ ಪರಿಸ್ಥಿತಿ ಇರುವೆ ಬಿಟ್ಟುಕೊಂಡಂತೆ ಆಗಿರುತ್ತದೆ. ಎಲ್ಲಿವರೆಗೆ ಆಕೆ ಸರಿಯಾಗಿ ಬಡಿಯುವುದಿಲ್ಲವೋ ಅಲ್ಲಿವರೆಗೂ ಟ್ರೋಲ್ ಆಗುತ್ತಲೇ ಇರುತ್ತಾಳೆ. ಎಮೋಜಿ ಹಾಕುವವನಿಗೆ ಮಾತ್ರ ಪುಗ್ಸಟ್ಟೆ ಒತ್ತುವ ಸುಖ ಬಿಟ್ಟರೆ ಬೇರೆ ವ್ಯತ್ಯಾಸವಾಗಿರುವುದಿಲ್ಲ.

ಅಷ್ಟಕ್ಕೂ ಹೇಗೇ ಒತ್ತಿದರೂ ಭಾವರಹಿತ ಎಮೋಜಿ ಬಣ್ಣ ಬದಲಿಸಲಾರದು. ಏನಿದ್ದರೂ ಇದ್ದಂತೆ ಬಿದ್ದು ಹೋಗುವ ಎಮೋಜಿ ಇತ್ತ ಪ್ರತ್ಯಕ್ಷವಾಗುತ್ತಿದ್ದಂತೆ ಅವಳ ಮನಸ್ಸಿನಲ್ಲಿ ಇರುವ ಶುದ್ಧ ಬಣ್ಣಗಳ ಕಲಸು ಮೇಲೋಗರ ಮಾಡಿಬಿಡುತ್ತದಲ್ಲ ಅದನ್ಹೇಗೆ ಸರಿ ಮಾಡೊದು..? ಬದುಕು ಬಣ್ಣಗಳ ಸಂತೆ ಅಂದರೆ ಸುಮ್ಮನೇನಾ..?

ಮೆಹಂದಿ ಹಿಂದಿದೆ ಸೈನ್ಸ್

ಮೆಹಂದಿ ಹಿಂದಿದೆ ಸೈನ್ಸ್ ಮೆಹಂದಿ ಅಂದ್ರೆ ಸಾಕು ಹೆಣ್ಮಕ್ಕಳ ಕೈ ಕಾಲು ಕುಣಿಯೋದಕ್ಕೆ ಶುರು ಮಾಡುತ್ತೆ. ಮೆಹಂದಿ ಕಂಡ್ರೆ ಅವರ ಕೈ…

ಕ್ಷಮಿಸಿಬಿಡು ಊರ್ಮಿಳೆ

ಊರ್ಮಿಳೆ, ಎಲ್ಲರ ಅನುಕಂಪ, ಕರುಣೆ ನಿನ್ನೆಡೆಗಾದರೆ, ನಾನೋ ಎಲ್ಲರ ಕಣ್ಣಲ್ಲೂ ಕಟುಕನಂತಾಗಿರುವೆ. ದೇಹವೆರಡು, ಜೀವವೊಂದು ಎಂಬಂತೆ ಬೆಳೆದ ನಾನು ಮತ್ತು ನನ್ನ…

ಆಗ ಮತ್ತು ಈಗ ಬದುಕು

ಆಗ: ಕೊಳ, ಬಾವಿ ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕ್ತಿದ್ರು. ಈಗ: ಫಿಲ್ಟರ್ ಆಗಿರುವ RO ನೀರು ಕುಡಿದ್ರೂ…

ಪ್ರೀತಿಯ ತಾಕತ್ತೇ ಅಂಥದ್ದು!

ಹೀಗೆ ಸಿಂಹಗಳ ಜೊತೆ ಕೂತ್ಕೊಂಡು ಫೊಟೋ ತೆಗಿಸ್ಕೊಳಕಾಗುತ್ತಾ? ನೆವರ್. ಸಿಂಹಗಳನ್ನ ಮುಟ್ಟೋದಿರ್ಲಿ ನೋಡಿದ್ರೇನೆ ಮೀಟರ್ ಆಫ್ ಆಗುತ್ತೆ. ಅಂಥದ್ರಲ್ಲಿ ಈ ಬಟ್ಟಲು…

ಜಸ್ಟ್ ಕೂದಲು ಅನ್ನಬೇಡಿ !

ಇದೊಂಥರ ಕ್ರೇಜಿ ಥಿಂಗ್. ನಮ್ಮ ತಲೆ ಕೂದಲಿಗೆ ನಿದ್ರೆಯನ್ನ ಟ್ರ್ಯಾಕ್ ಮಾಡುವ ಗುಣ ಇದೆಯಂತೆ. ಹೇರ್ ಫಾಲ್ಲಿಕಲ್ಸ್‌ನಲ್ಲಿ ಕ್ಲಾಕ್ ಜೀನ್ಸ್ ಇದ್ದು…

ಮಗುವಿನ ಸುತ್ತಾ ಸುತ್ತಿಕೊಳ್ಳುವ ಸುಳ್ಳು!

ನಿಮ್ಮ ಮಗು ಸುಳ್ಳು ಹೇಳ್ತಿದೆಯಾ? ಹೇಳೇ ಹೇಳುತ್ತೆ ಬಿಡಿ. ಯಾಕಂದ್ರೆ ಬೇಕೋ ಬೇಡ್ವೋ ಮಕ್ಕಳು ಸುಳ್ಳು ಹೇಳೋದನ್ನ ಕಲಿತುಬಿಡ್ತವೆ. ಅದಕ್ಕೆ ಕಾರಣ…

ಸಂತೋಷದಿಂದ ಇರುವುದು ಹೇಗೆ?

ಆಫೀಸಿನ ಅನಾಥ ಲೈಬ್ರರಿಯ ಮೇಲೆ ಕಣ್ಣಾಡಿಸುತ್ತಿದ್ದವನಿಗೆ ‘ತಿಳಿವು ಗೆಲುವು’ ಪುಸ್ತಕ ಕಣ್ಣಿಗೆ ಬಿತ್ತು. ಮುಖಪುಟ ಹರಿದಿತ್ತು. ಕೈಗೆತ್ತಿಕೊಂಡು ಸುಮ್ಮನೆ ತಡವಿದೆ. ಆಗ…

ಮುಳುಗುತ್ತಿದೆ ಕೇರಳ.. ಸಹಾಯಕ್ಕೆ ನಿಂತ್ರು ಸೆಲೆಬ್ರಿಟಿಗಳು..!

ದೇವರ ನಾಡು ಕೇರಳ ವರುಣ ದೇವನ ಕೆಂಗಣ್ಣಿಗೆ ಗುರಿಯಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳ ಅಕ್ಷರಶಃ ಜಲಾವೃತಗೊಂಡಿದೆ. ಸಾವಿರಾರು ಜನರು ಮನೆಗಳನ್ನು…