ಸತ್ತಮೇಲೂ ಇವರ ಅಕೌಂಟ್ ಗೆ ಹಣದ ಹೊಳೆಯೇ ಹರಿದು ಬರ್ತಿದೆ!

ದುಡ್ಡು ಮತ್ತು ಪ್ರಸಿದ್ಧಿಗೋಸ್ಕರ ಮನುಷ್ಯ ಏನೇನೆಲ್ಲಾ ಮಾಡ್ತಾನೆ ಅಲ್ವ! ತನ್ನಲ್ಲಿರುವ ಪ್ರತಿಭೆಗೆ ಹೊಳಪು ಕೊಟ್ಟು ಸಕ್ಸಸ್ ನ ಹಾದಿಯಲ್ಲಿ ಎದುರಾದ ಸಂಕಷ್ಟಗಳನ್ನೆಲ್ಲಾ ಎದುರಿಸಿ ಒಂದಿನ ಕೀರ್ತಿಶಿಖರ ಏರಿ ನಿಂತುಬಿಡುತ್ತಾನೆ. ಗುರಿ  ತಲುಪಿಬಿಡುತ್ತಾನೆ. ಹಾಗೆ ನೋಡನೋಡುತ್ತಲೇ ತಾನು ಕಟ್ಟಿದ ಸಾಮ್ರಾಜ್ಯವನ್ನೆಲ್ಲಾ ಬಿಟ್ಟು  ಒಂದಿನ ಇದ್ದಕ್ಕಿದ್ದಂತೆ ಸತ್ತುಹೋಗುತ್ತಾನೆ. ಹೀಗೆ ಸತ್ತ ಜಗತ್ಪ್ರಸಿದ್ಧರು ತುಂಬಾ ಜನ ಇದಾರೆ. ಅವರಿಗೆ ಬದುಕಿದ್ದಾಗಲೂ ಹಣದ ಕೊರತೆ ಇರಲಿಲ್ಲ. ಸತ್ತಮೇಲೂ ಇಲ್ಲ. ಯಾಕೆಂದ್ರೆ ಸತ್ತಮೇಲೂ ಅವರ ಅಕೌಂಟ್ ಗೆ ಕೋಟಿಕೋಟಿ ಹಣ ಹರಿದು ಬರ್ತಾನೆ ಇದೆ.

ಮೈಕೆಲ್ ಜಾಕ್ಸನ್

  ನಿಮಗೆ ಮೈಕೆಲ್ ಜಾಕ್ಸನ್ ಗೊತ್ತಲ್ವ. ಆ ಮನುಷ್ಯನನ್ನ ಯಾರು ಮರೆತಿರ್ತಾರೆ ಹೇಳಿ. ದೇಶ ಭಾಷೆಗಳನ್ನೂ ಮೀರಿ ನಿಂತು ಜನರಿಗೆ ಇಷ್ಟವಾದ ಪಾಪ್ ಐಕಾನ್ ಅಂದ್ರೆ ಅದು ಮೈಕೆಲ್ ಜಾಕ್ಸನ್. ಆತ ಏರಿದ ಎತ್ತರ, ಗಳಿಸಿಕೊಂಡ ಜನಪ್ರಿಯತೆಯನ್ನು ಸರಿಗಟ್ಟಲು ಯಾರೊಬ್ಬರಿಗೂ ಸಾಧ್ಯವಾಗಿಲ್ಲ. ಮುಂದೆ ಸಾಧ್ಯವಿಲ್ಲವೇನೋ. ಅಂಥ ಪಾಪ್ ಲೆಜೆಂಡ್ 2009ರಲ್ಲಿ ಇದ್ದಕ್ಕಿದ್ದಂತೆ ಮರಣ ಹೊಂದಿದ್ದು ನಿಮಗೆ ಗೊತ್ತೇ ಇದೆ. ಸಾವಿರಾರು ಕೋಟಿ ಆಸ್ತಿಯ ಒಡೆಯನಾಗಿದ್ದ ಮೈಕೆಲ್ ಜಾಕ್ಸನ್ 2009ರಲ್ಲಿ ಸತ್ತರೂ ಅವನ ಅಕೌಂಟ್ ಗೆ ರಾಯಲ್ಟಿ ಹಣ ಬಂದು ಬೀಳ್ತಾನೆ ಇದೆ. ಫೋರ್ಬ್ಸ್ ಪ್ರಕಾರ 2018ರಲ್ಲಿ ಮೈಕೆಲ್ ಜಾಕ್ಸನ್ ಅಕೌಂಟ್ ಗೆ 400 ಮಿಲಿಯನ್ ಡಾಲರ್ ಹಣ ಬಂದಿತ್ತು. ಅಂದ್ರೆ ಸುಮಾರು 2972 ಕೋಟಿ ರೂಪಾಯಿ. 2018ರಲ್ಲಿ ಜಗತ್ತಿನ ಹೈಯೆಸ್ಟ್ ಪೇಯ್ಡ್ ಸಂಗೀತ ನಿರ್ದೇಶಕನ ಗಳಿಕೆ ಇದಕ್ಕಿಂತ ಕಡಿಮೆ ಇತ್ತು ಅನ್ನೋದು ನಿಮಗೆ ಗೊತ್ತಿರಲಿ.

ಸಾವಿನ ನಂತರವೂ ಮೈಕೆಲ್ ಜಾಕ್ಸನ್ ಗೆ EMI ಮ್ಯೂಸಿಕ್, ಸೋನಿ ಮ್ಯೂಸಿಕ್ ಅಲ್ಲದೆ ಟೆಲಿವಿಷನ್  ಹಕ್ಕುಗಳಿಂದ ಅಪಾರ ಪ್ರಮಾಣದ ಹಣ ಹರಿದು ಬರುತ್ತಿದೆ.

ಎಲ್ವಿಸ್ ಪ್ರಿಸ್ಲಿ

 ಎಲ್ವಿಸ್ ಪ್ರಿಸ್ಲಿ ಅನ್ನೋ (Elvis Presley) ಒಬ್ಬ ಖ್ಯಾತ ಗಾಯಕ, ನಟ, ಸಂಗೀತಗಾರ ಅಮೆರಿಕದಲ್ಲಿ ಜೀವಿಸಿದ್ದ. ಆತನನ್ನ 20ನೇ ಶತಮಾನದ ಕಲ್ಚರಲ್ ಐಕಾನ್ ಅಂತ ಅಮೆರಿಕ ಗುರುತಿಸಿದೆ. ಅಷ್ಟೆ ಅಲ್ಲ ಎಲ್ವಿಸ್ ನನ್ನ ಕಿಂಗ್ ಆಫ್ ರಾಕ್ ಅಂಡ್ ರೋಲ್ ಅಂತಾನೆ ಕರಿತಾರೆ. ಆತನ ಹಾಡುಗಳನ್ನ ಇವತ್ತು ಕೇಳಿದ್ರೂ ಜನ ಹುಚ್ಚೆದ್ದು ಕುಣಿತಾರೆ. ಅಷ್ಟು ವರ್ಲ್ಡ್ ಫೇಮಸ್ ಸಿಂಗರ್ ಪ್ರಿಸ್ಲಿ.

ಪ್ರಿಸ್ಲಿ 1977ರಲ್ಲಿ ಜಸ್ಟ್ 42ನೇ ವಯಸ್ಸಿಗೆ ಹೃದಾಯಾಘಾತಕ್ಕೊಳಗಾಗಿ ಮರಣಹೊಂದುತ್ತಾನೆ. ಆದರೇನು ಮರಣಾನಂತರ ಆತನಿಗೆ ಬರುವ ಆದಾಯ ನಿಂತಿಲ್ಲ. 2018ರಲ್ಲಿ ಆತನ ಬೊಕ್ಕಸಕ್ಕೆ 40 ಮಿಲಿಯನ್ ಡಾಲರ್  ಹಣ ಹರಿದುಬಂದಿತ್ತು.

ಮರಿಲಿನ್ ಮನ್ರೋ

ಮರಿಲಿನ್ ಮನ್ರೋ ಅನ್ನೋ ನಟಿಯ ಬಗ್ಗೆ ಜಗತ್ತಿನಲ್ಲಿ ಗೊತ್ತಿಲ್ಲದೆ ವ್ಯಕ್ತಿಯೇ ಇಲ್ವೇನೋ! ಅವಳ ಮಾದಕತೆಗೆ ಭೂಮಂಡಲದಲ್ಲಿ ಫಿದಾ ಆಗದ ಗಂಡೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಆಕೆ ಜಗತ್ಪ್ರಸಿದ್ಧಿ ಪಡೆದಿದ್ದಳು. ಸತ್ತು 58 (1962) ವರ್ಷವಾದರೂ ಆಕೆಯ ಮಾದಕತೆಗೆ ಬೋಲ್ಡ್ ಆಗೋರು ಇವತ್ತಿಗೂ ಇದಾರೆ ಅಂದರೆ ನಂಬುತ್ತೀರಾ!

ಮರಿಲಿನ್ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ತನ್ನ 36ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋಗುತ್ತಾಳೆ. ಅದು ಸಾವಲ್ಲ ಕೊಲೆ ಅನ್ನೋ ವಾದವೂ ಇದೆ. ಯಾಕೆಂದ್ರೆ ಮರ್ಲಿನ್ ಗೆ ಒಂದೆರಡು ಸಂಬಂಧಗಳು ಇರಲಿಲ್ಲ. ಜಾನ್ ಎಫ್ ಕೆನಡಿ ಮತ್ತು ರಾಬರ್ಟ್ ಎಫ್ ಕೆನೆಡಿ ಇಬ್ಬರ ಹೆಸರೂ ಆಕೆಯೊಟ್ಟಿಗೆ ತಳಕುಹಾಕಿಕೊಂಡಿತ್ತು. ಅದೇ ಸಾವಿಗೆ ಕಾರಣವೂ ಆಯ್ತು ಅನ್ನೋ ಬಲವಾದ ವಾದವೂ ಇದೆ.

ಇಂಥ ಮಾದಕ ಚೆಲುವೆ ಮರಿಲಿನ್ ಮನ್ರೋಳ ತಿಜೋರಿಗೆ ಇವತ್ತಿಗೂ ಹರಿದು ಬರುತ್ತಿರುವ ಆದಾಯ 14 ಮಿಲಿಯನ್ ಡಾಲರ್. ಅದರಲ್ಲಿ ಹೈ ಪ್ರೊಫೈಲ್ ಬ್ರಾಂಡ್ Montblanc ನಿಂದಾನೆ ಅತಿ ಹೆಚ್ಚು ಆದಾಯ ಬರ್ತಿದೆ.

ಗಾಲ್ಫ್ ಲೆಜೆಂಡ್ ಎನಿಸಿಕೊಂಡಿದ್ದಂಥ ಅರ್ನಾಲ್ಡ್ ಪಾಮರ್ ಅಕೌಂಟ್ ಇವತ್ತಿಗೂ ಭರ್ತಿ. 38 ಮಿಲಿಯನ್ ಡಾಲರ್ ವರ್ಷಕ್ಕೆ ಬಂದು ಸೇರುತ್ತಿದೆ. ಚಾರ್ಲಸ್ ಶುಲ್ಜ್ ಜಗತ್ಪ್ರಸಿದ್ಧ ಕಾರ್ಟೂನಿಸ್ಟ್. 2000ನೇ ಇಸವಿಯಲ್ಲಿ ಆತ ಸತ್ತಿದ್ದರೂ ಆತನ ಆದಾಯದ ಮೂಲ ಬತ್ತಿಲ್ಲ. ವರ್ಷವೊಂದಕ್ಕೆ 34 ಮಿಲಿಯನ್ ಡಾಲರ್ ಹಣ ಬರ್ತಿದೆ. ಈ ಸಾಲಿಗೆ ಬಾಕ್ಸಿಂಗ್ ಲೆಜೆಂಡ್ ಮಹಮದ್ ಅಲಿ ಕೂಡ ಸೇರುತ್ತಾರೆ.

ಇದಕ್ಕೆ ತಾನೆ ಗೆಲ್ಲಬೇಕು, ಸಖತ್ ಹೆಸರು ಮಾಡಬೇಕು ಅನ್ನೋದು.

ಸಾಧಕರು ಸತ್ತ ಮೇಲೂ ಬದುಕಿರ್ತಾರೆ ಅಂತಾರಲ್ಲ ಅದು ನಿಜ ಬಿಡಿ.

         ಆರ್ ಎ

Please follow and like us: