ಶಾಕಿಂಗ್ ನ್ಯೂಸ್‌…! ಹೈ-ಸ್ಪೀಡ್ ನೆಟ್ಟು ನಿದ್ದೆಗೆ ಕುತ್ತು..!

ಡಿಜಿಟಲ್ ಸಾಧನಗಳ ಬಳಕೆಯ ಅಭ್ಯಾಸವು ನಿದ್ದೆಯ ಸಮಯದ ಮೇಲೆ ಮತ್ತು ಒಟ್ಟಾರೆ ನಿದ್ದೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು ಇದು ಮನುಷ್ಯನ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಅದರಲ್ಲೂ 13 ರಿಂದ 30 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಎಂಬುದು ಅಧ್ಯಯನಕಾರರ ಅಭಿಪ್ರಾಯ.

ಮೊಬೈಲ್ ನೋಡುವುದು, ಟಿವಿ ನೋಡುವುದು, ಕಂಪ್ಯೂಟರ್ ಗೇಮ್ಸ್ ಇತ್ಯಾದಿಗಳನ್ನು ಹೈ ಸ್ಪೀಡ್ ಇಂಟರ್ನೆಂಟ್ ಬಳಸಿ ಇವರು ಮಾಡುತ್ತಾರೆ ಮತ್ತು ನಿದ್ದೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಒಂದು ವೇಳೆ ಈ ಸಾಲಿನಲ್ಲಿ ನೀವೂ ಕೂಡ ಸೇರುವವರಾಗಿದ್ದರೆ ಖಂಡಿತ ನಿಮ್ಮ ಆರೋಗ್ಯದ ಕಡೆ ಗಮನ ಕೊಡಬೇಕಾಗಿರುವುದು ಬಹಳ ಮುಖ್ಯ.

Please follow and like us:

Leave a Reply