ಮೊಬೈಲ್‌ ನೀರಲ್ಲಿ ಬಿತ್ತಾ.. ಚಿಂತೆ ಬಿಡಿ ಇದನ್ನ ಓದಿ

ಭಾರತದಲ್ಲಿ ಮೊಬೈಲ್‌ಗಳು ನೀರಿನಲ್ಲಿ ಬೀಳುವುದು ಸರ್ವೇ ಸಾಮಾನ್ಯ. ಎಷ್ಟೋ ಜನ ನೀರಲ್ಲಿ ಮೊಬೈಲ್ ಕೆಡವಿ ಅದನ್ನು ಮೂಲೆಗೆ ತಳ್ಳಿದ್ದಾರೆ. ಮೊಬೈಲ್ ಎಲೆಕ್ಟ್ರಾನಿಕ್ ಸಾಧನವಾಗಿರುವುದರಿಂದ ನೀರು ಬಿದ್ದ ತಕ್ಷಣ ಮೊಬೈಲ್ ಒಳಗಿನ ಹಾರ್ಡ್‌ವೇರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಾಧ್ಯತೆಯೇ ಹೆಚ್ಚು.

ಬಹಳಷ್ಟು ಮೊಬೈಲ್‌ಗಳು ಇನ್ನು ವಾಟರ್‌ಪ್ರೂಪ್‌ ತಂತ್ರಜ್ಞಾನವನ್ನು ಹೊಂದಿಲ್ಲ. ಭಾರತದಲ್ಲಿ ಹೋಳಿ ಆಚರಣೆಯಲ್ಲಂತೂ ಹಾಳಾದ ಮೊಬೈಲ್‌ಗಳಿಗೆ ಲೆಕ್ಕವಿಲ್ಲ, ಕೃಷಿ ಮಾಡುವಾಗ ಕಾಲುವೆಗೆಳಲ್ಲಿ ಬಿದ್ದು ಮೂಲೆ ಸೇರಿದ ಅದೆಷ್ಟೋ ಮೊಬೈಲ್‌ಗಳು ನಮಗೆ ನೋಡಲು ಕಾಣಸಿಗುತ್ತವೆ. ಆದ್ದರಿಂದ ಮೊಬೈಲ್ ನೀರಿನಲ್ಲಿ ಬಿದ್ದಾಗ ಒಂದಿಷ್ಟು ಎಚ್ಚರಿಕೆ ಅಂಶಗಳನ್ನು ಅನುಸರಿಸಿದರೆ ನಿಮ್ಮ ಮೊಬೈಲ್ ನಿಮಗೆ ಜೀವಂತವಾಗಿ ಸಿಗುತ್ತದೆ. ಆದರೆ, ಮೊಬೈಲ್‌ ನೀರಿಗೆ ಬಿದ್ದಾಗ ಮಾಡಬಾರದಿರುವ ಅನೇಕ ಅಂಶಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ನೀವು ಆ ಹಂತಗಳನ್ನು ಅನುಸರಿಸಿದರೆ, ನಿಮ್ಮ ಮೊಬೈಲ್ ಕೋಮಾದಿಂದ ಎದ್ದೇಳುವುದೇ ಇಲ್ಲ. ಆ ಅಂಶಗಳನ್ನು ನೀವೇ ನೋಡಿ.

ನೀರಿನಲ್ಲಿ ಸ್ಮಾರ್ಟ್‌ಫೋನ್‌ ಬಿದ್ದಿರುವ ಬಗ್ಗೆ ಕಂಪನಿಗೆ ಸುಳ್ಳು ಹೇಳಬೇಡಿ ಸ್ಮಾರ್ಟ್‌ಫೋನ್‌ಗೆ ವಾರಂಟಿ ಇರುತ್ತದೆ. ಆದರೆ, ನಿಮ್ಮ ಕಂಪನಿ ಆಕಸ್ಮಿಕ ಘಟನೆಗಳಿಂದ ವಾರಂಟಿ ಸೇರಿಸದೆ ಹೋದರೆ ವಾರಂಟಿ ಸಿಗುವುದಿಲ್ಲ. ಅದಕ್ಕಾಗಿ ನಿಮ್ಮ ಒಪ್ಪಂದದ ಎಲ್ಲ ಷರತ್ತುಗಳನ್ನು ಓದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಮರುಪಾವತಿ ಪಡೆಯಲು ಕೆಲವೊಮ್ಮೆ ಕೆಲವು ಷರತ್ತುಗಳನ್ನು ನೀವು ಅನುಸರಿಸಬೇಕಾಗುತ್ತದೆ. ಅದಲ್ಲದೇ ಇಮ್ಮರ್ಷನ್ ಘಟನೆಯನ್ನು ನಿರಾಕರಿಸಬೇಡಿ. ಏಕೆಂದರೆ ಸ್ಮಾರ್ಟ್‌ಫೋನ್‌ಗಳು ಇಮ್ಮರ್ಷನ್ ಸೆನ್ಸಾರ್ ಹೊಂದಿದ್ದು, ಅವು ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಬಣ್ಣ ಬದಲಾಯಿಸುತ್ತವೆ.

ಕೂದಲಿನ ಡ್ರೈಯರ್‌ನಿಂದ ಫೋನ್ ಒಣಗಿಸಬೇಡಿ: ಕೂದಲಿನ ಡ್ರೈಯರ್ ಉಷ್ಣಾಂಶ ತುಂಬಾ ಬಿಸಿಯಾಗಿರುತ್ತದೆ. ಇದರಿಂದ ಸ್ಮಾರ್ಟ್‌ಫೋನ್‌ನಲ್ಲಿರುವ ದುರ್ಬಲ ಅಥವಾ ಮೆದು ಎಲೆಕ್ಟ್ರಾನಿಕ್ ಘಟಕಗಳಿಗೆ ಹಾನಿಯಾಗುತ್ತದೆ. ಅಲ್ಲದೆ, ನಿಮ್ಮ ಸ್ಮಾರ್ಟ್‌ಫೋನ್‌ನ್ನು ಬಿಸಿ ಒವನ್ ಅಥವಾ ರೇಡಿಯೇಟರ್‌ನಲ್ಲಿ ಇಡಬೇಡಿ.

ಚಾರ್ಜರ್, ಯುಎಸ್‌ಬಿ, ಹೆಡ್‌ಫೋನ್ ಪ್ಲಗ್ ಮಾಡಬೇಡಿ: ಸ್ಮಾರ್ಟ್‌ಫೋನ್ ನೀರಿನಿಂದ ಹಾನಿಗೊಳಗಾದಾಗ ಮೊಬೈಲ್‌ನನ್ನು ಚಾರ್ಜ್‌ಗೆ ಹಾಕಬೇಡಿ. ಏಕೆಂದರೆ ಅದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುತ್ತದೆ. ಮತ್ತು ಮೊಬೈಲ್‌ನ್ನು ಇನ್ನಷ್ಟು ಹಾನಿಗೊಳಿಸುತ್ತದೆ. ಇದಲ್ಲದೇ ಯುಎಸ್‌ಬಿ, ಹೆಡ್‌ಪೋನ್ ಸಹ ಕನೆಕ್ಟ್ ಮಾಡಬೇಡಿ. ಇದರಿಂದ ನೀರಿನ ಹನಿಗಳು ಇನ್ನು ಒಳಹೋಗುವ ಸಂಭವವೇ ಹೆಚ್ಚು.

ತಕ್ಷಣ ಸ್ವಿಚ್ ಆಫ್ ಮಾಡಿ: ಸ್ಮಾರ್ಟ್‌ಫೋನ್‌ ನೀರಿನಲ್ಲಿ ಬಿದ್ದ ತಕ್ಷಣ ಸ್ವಿಚ್ ಆಫ್ ಮಾಡುವುದು ಉತ್ತಮ ಆಯ್ಕೆ. ನೀರಿನಲ್ಲಿ ಬಿದ್ದ ಸ್ಮಾರ್ಟ್‌ಫೋನ್‌ನ್ನು ತಕ್ಷಣ ಬಳಸುವುದು ಅಪಾಯಕಾರಿ. ಅದಲ್ಲದೇ ಇದು ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್‌ಗೆ ಇನ್ನಷ್ಟು ಹಾನಿ ಮಾಡಿ, ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನಿಲ್ಲಿಸಬಹುದು. ಅಲುಗಾಡಿಸಿ ಮತ್ತು ಒಣಗಿಸಿ ಸ್ವಿಚ್‌ ಆಫ್ ಮಾಡಿದ ನಂತರ ಒಣ ಬಟ್ಟೆ ತೆಗೆದುಕೊಂಡು ಸಂಪೂರ್ಣವಾಗಿ ಒರೆಸಿ. ನಂತರ, ಸಾಧ್ಯವಾದಷ್ಟು ಹೆಚ್ಚು ತೇವಾಂಶ ಹೀರಿಕೊಳ್ಳುವ ಕಾಗದದ ಉತ್ಪನ್ನಗಳಲ್ಲಿ ಅಥವಾ ಟವೆಲ್‌ನಲ್ಲಿ ಸ್ಮಾರ್ಟ್‌ಫೋನ್ ಕಟ್ಟಿ ಇಡಿ. ಹೆಡ್‌ಫೋನ್, ಕೇಬಲ್‌ಗಳನ್ನು ಅನ್‌ಪ್ಲಗ್ ಮಾಡಿ ಮತ್ತು SIM ಕಾರ್ಡ್, ಮೆಮೊರಿ ಕಾರ್ಡ್‌ಗಳನ್ನು ತೆಗೆದುಹಾಕಿ. ನಂತರ, ಸ್ಮಾರ್ಟ್‌ಫೋನ್ ಅಲುಗಾಡಿಸಿ ಇದರಿಂದ ಒಳ ಇರುವ ನೀರು ಹೊರಬರಲು ಸಹಾಯವಾಗುತ್ತದೆ.

ಸ್ಮಾರ್ಟ್‌ಫೋನ್‌ನ್ನು ಅಕ್ಕಿಯಲ್ಲಿ: ಇಡಿ ತೇವಾಂಶ ಹೀರಿಕೊಳ್ಳುವ ಸಲುವಾಗಿ ಅಕ್ಕಿ ಚೀಲದಲ್ಲಿ ಅಥವಾ ಗಾಳಿ ಬೀಸುವ ಪೆಟ್ಟಿಗೆಯಲ್ಲಿ ಮೊಬೈಲ್ ಇಡುವುದು ಉತ್ತಮ ಪರಿಹಾರ. ಇದರಿಂದ ಬೇಗ ನಿಮ್ಮ ಫೋನ್ ಮೊದಲಿನಂತೆ ಆಗುತ್ತದೆ. ಅಕ್ಕಿ ಪರ್ಯಾಯ ಪರಿಹಾರವಾಗುತ್ತದೆ, ಏಕೆಂದರೆ ಧಾನ್ಯಗಳು ತೇವಾಂಶ ಹೀರಿಕೊಳ್ಳುತ್ತವೆ. ಆದರೂ, ಅಕ್ಕಿಯಲ್ಲಿರುವ ಧೂಳು ಮೊಬೈಲ್ ಸೇರದಂತೆ ನೋಡಿಕೊಳ್ಳಿ. ಕನಿಷ್ಠ 24 ರಿಂದ 48 ಗಂಟೆ ಅಕ್ಕಿಯಲ್ಲಿಯೇ ಮೊಬೈಲ್ ಇದ್ದರೆ ಒಳಿತು.

ಸೂರ್ಯನ ಬೆಳಕಿನಲ್ಲಿಯೂ ಸ್ಮಾರ್ಟ್‌ಫೋನ್‌ನ್ನು ಒಣಗಲು ಇಡಬಹುದು: ಸ್ಮಾರ್ಟ್‌ಫೋನ್ ಒಣಗಿಸಲು ಬ್ಯಾಕ್ ಪ್ಯಾನೆಲ್ ತೆಗೆದು ನೇರವಾಗಿ ಸೂರ್ಯನ ಬೆಳಕಿನಲ್ಲಿ ಇರಿಸಬಹುದು. ಈ ಪ್ರಯತ್ನ ಹ್ಯಾಂಡ್‌ಸೆಟ್‌ನ್ನು ಸಂಪೂರ್ಣವಾಗಿ ಒಣಗಿಸಲು ಸಹಾಯ ಮಾಡುತ್ತದೆ.

ಶೀಘ್ರದಲ್ಲಿಯೇ ಎಲ್ಲಾ ಡೇಟಾ ಬ್ಯಾಕ್ ಅಪ್ ಮಾಡಿ: ಇಮ್ಮರ್ಶನ್ನಲ್ಲಿ ದ್ರವ ಅಥವಾ ನೀರು ಹೋದರೆ ಸ್ಮಾರ್ಟ್‌ಫೋನ್‌ಗಳಿಗೆ ಹಾನಿಯುಂಟಾಗುತ್ತದೆ. ಆದರೆ, ಕೆಲವು ಅದೃಷ್ಟವಶಾತ್ ಸಂದರ್ಭಗಳಲ್ಲಿ ಸಾಧನವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಮತ್ತು ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ಆ ಸಂದರ್ಭದಲ್ಲಿ ನೀವು ಮಾಡಬೇಕಾದ ಮೊದಲ ಕೆಲಸ ಡೇಟಾ ಬ್ಯಾಕ್ ಅಪ್ ಮಾಡಿಕೊಳ್ಳುವುದು. ಏಕೆಂದರೆ ಯಾವಾಗ ಸ್ಮಾರ್ಟ್‌ಫೋನ್ ಕೈಕೊಡುತ್ತೋ ಗೊತ್ತಿಲ್ಲ.

Please follow and like us:

Leave a Reply