ಮುಳುಗುತ್ತಿದೆ ಕೇರಳ.. ಸಹಾಯಕ್ಕೆ ನಿಂತ್ರು ಸೆಲೆಬ್ರಿಟಿಗಳು..!

ದೇವರ ನಾಡು ಕೇರಳ ವರುಣ ದೇವನ ಕೆಂಗಣ್ಣಿಗೆ ಗುರಿಯಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳ ಅಕ್ಷರಶಃ ಜಲಾವೃತಗೊಂಡಿದೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೇರಳದ ಜನತೆಗೆ ಕರ್ನಾಟಕ ಮತ್ತು ಕೇಂದ್ರದಿಂದ ಸಹಾಯ ಹಸ್ತ ನೀಡಲಾಗುತ್ತಿದೆ. ಈಗ ತಮ್ಮ ನಾಡಿನ ಜನರ ಕಷ್ಟ ಕಂಡು ಸಹಾಯಕ್ಕೆ ನಿಂತಿದ್ದಾರೆ ಸೆಲೆಬ್ರಿಟಿಗಳು.

ಹೌದು.. ಪ್ರವಾಹದಿಂದ ತತ್ತರಿಸಿರುವ ಕೇರಳದ ಜನರಿಗೆ ಸಹಾಯ ಮಾಡಲು ಸೆಲೆಬ್ರಿಟಿಗಳು ಮುಂದಾಗುತ್ತಿದ್ದಾರೆ. ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಭರ್ಜರಿ ಹಿಟ್ ಪಡೆದ ವಿಜಯ್ ದೇವರಕೊಂಡ ತಮ್ಮ ಬ್ಯಾಂಕ್ ಖಾತೆಯಿಂದ 5 ಲಕ್ಷ ರೂಪಾಯಿಯನ್ನು ಕೇರಳದ ಪ್ರವಾಹ ಪೀಡಿತರ ಪರಿಹಾರ ಕಾರ್ಯಕ್ಕೆ ನೀಡಿದ್ದಾರೆ. ಸಹಾಯ ಮಾಡಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಜಯ್, ‘ಕೇರಳ ನನ್ನ ಮೆಚ್ಚಿನ ತಾಣವಾಗಿತ್ತು. ನಾನು ಕೇರಳದಲ್ಲಿ ಹಲವರನ್ನು ಭೇಟಿ ಮಾಡಿದ್ದೇನೆ. ನನ್ನ ಹಲವು ಆಪ್ತರು ಅಲ್ಲಿದ್ದಾರೆ. ವೈಯಕ್ತಿಕವಾಗಿ ಅವರ ಬಳಿ ಹೇಗೆ ತಲುಪಬೇಕೆಂಬುದು ತಿಳಿಯುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಮಲಯಾಳಂ ನಟಿ ಅನುಪಮಾ ಪರಮೇಶ್ವರ್ ಕೂಡ ತಮ್ಮ ನಾಡಿನ ಜನರ ನೆರವಿಗೆ ನಿಂತಿದ್ದಾರೆ. ತಮ್ಮ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ನಿಧಿಗೆ ಸಲ್ಲಿಸುವುದರ ಜತೆಗೆ ಇತರರಿಗೂ, ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುವುದರ ಮೂಲಕ ಮಾನವೀಯತೆ ಮೆರದಿದ್ದಾರೆ.

ಇನ್ನು ಇವರ ಜತೆ ಮಲಯಾಳಂ ನಟ ಕಾರ್ತಿ ಕೂಡ ಲಕ್ಷಾಂತರ ರೂಪಾಯಿ ನೆರವು ನೀಡುವುದರ ಮೂಲಕ ರೀಲ್‍ನಲ್ಲಿ ಮಾತ್ರವಲ್ಲ ರಿಯಲ್‍ನಲ್ಲೂ ಹೀರೋಗಳಾಗಿದ್ದಾರೆ.

Please follow and like us:

Leave a Reply