ಮಗು ಮುದ್ದಾಡುವ ಮುನ್ನ ಪ್ಲೀಸ್ ಇದನ್ನ ಓದಿ

ಮುದ್ದುಮುದ್ದಾದ ಪುಟ್ಟ ಕಂದನನ್ನ ನೋಡಿದ್ರೆ ಯಾರಿಗೆ ಮುದ್ದಾಡಲು ಮನಸ್ಸಾಗಲ್ಲ ಹೇಳಿ?

ಕೋಮಲವಾದ ಅದರ ಕೆನ್ನೆ ಹಿಂಡಿ, ಗಲ್ಲ ಸವರಿ, ಲೊಚಕ್ ಲೊಚಕ್ ಅಂತ ಮುತ್ತು ಕೊಡೋ ಮಗು ಪ್ರೇಮಿಗಳೇ ಜಾಸ್ತಿ. ಕೆಲವರಂತೂ ಮಗುವಿನ ತುಟಿಗೆ ಮುತ್ತು ಕೊಟ್ಟುಬಿಡ್ತಾರೆ. ಆದ್ರೆ ಜಸ್ಟ್ ವೇಯ್ಟ್. ಹಾಗೆ  ಯಾರದ್ದೋ ಮಗು ಕಂಡ ತಕ್ಷಣ ಎತ್ಕೊಳ್ಳೋದು, ಕೆನ್ನೆ ಹಿಂಡೋದು, ಮುತ್ತು ಕೊಡೋದು ಎಲ್ಲಾ ಮಾಡಬೇಡಿ. ಡೇಂಜರ್. ನಿಮಗಲ್ಲ ಮಗೂಗೆ.

ಮಗು ಎತ್ಕೊಳ್ಳೋದು, ಮುದ್ದಾಡೋದು ನಿಜವಾದ ಪ್ರೀತಿ ಕರೆಕ್ಟು. ಆದ್ರೆ ಹಾಗೆ ಮಗುವನ್ನ ಎತ್ಕೊಳ್ಳೋ ಮೊದ್ಲು ನಿಮ್ಮ ಕೈ ಎಷ್ಟು ಸ್ವಚ್ಛವಾಗಿದೆ? ನೀವು ಎಷ್ಟು ಆರೋಗ್ಯವಾಗಿದ್ದೀರಾ? ನಿಮಗೆ ಕೆಮ್ಮಿದೆಯಾ, ಜ್ವರ ಇದೆಯಾ? ಸಾಂಕ್ರಾಮಿಕ ಕಾಯಿಲೆ ಇದೆಯಾ? ಇದ್ರೆ ಪ್ಲೀಸ್ ಅವಾಯ್ಡ್. ಈ ಕೊರೋನಾ ಸಮಯದಲ್ಲಂತೂ ಮಗು ಹತ್ರಕ್ಕೂ ಹೋಗ್ಬೇಡಿ.

ನೀವು HPV ವೈರಸ್ ಟೈಪ್ ಒನ್ ಬಗ್ಗೆ ಕೇಳಿದ್ದೀರಲ್ಲ. ಓರಲ್ ಹರ್ಪಸ್ ವೈರಸ್ ಅಂತಾರೆ. ಇದರ ಬಗ್ಗೆ ಬಹುತೇಕರಿಗೆ ಅರಿವಿಲ್ಲ. ಮಗುವನ್ನ ಎತ್ಕೊಂಡಾಗ, ಮುದ್ದಾಡುವಾಗ, ಮುತ್ತು ಕೊಟ್ಟಾಗ ಬಹಳ ಸುಲಭವಾಗಿ ಈ ವೈರಸ್ ನಿಮ್ಮ ಮಗುವಿಗೆ ಅಂಟಿಕೊಳ್ಳುತ್ತೆ. ಇದ್ರಿಂದ ಮಗುವಿನ ಲಿವರ್, ಶ್ವಾಸಕೋಶ, ಚರ್ಮ, ಕಣ್ಣು ಮತ್ತು ತುಟಿ ತೀವ್ರ ಸೋಂಕಿಗೆ ಒಳಗಾಗುತ್ತೆ.  ಕೆಲವು ಸಲ ಮಗುವಿನ  ಬ್ರೈನ್ ಮೇಲೆ ಕೂಡ ವೈರಸ್ ಅಟ್ಯಾಕ್ ಮಾಡಬಹುದು.ಇಮ್ಮಿಡಿಯೆಟ್ ಆಗಿ ಟ್ರೀಟ್ ಮೆಂಟ್ ಕೊಡಿಸಲಿಲ್ಲ ಅಂದ್ರೆ ಮಗು ಅಪಾಯಕ್ಕೆ ಒಳಗಾಗಬಹುದು.

ಮಗುವನ್ನ ಸೋಂಕಿನಿಂದ ರಕ್ಷಿಸಲು ಎರಡು ದಾರಿಗಳಿವೆ. ಒಂದು, ಅಪ್ಪ ಅಮ್ಮನೇ ಮಗು ಬಗ್ಗೆ ಕೇರ್ ತಗೊಳ್ಳಬೇಕು. ಮನೆಗೆ ಯಾರೋ ಅಪರಿಚಿತರು ಬಂದಾಗ ಮಗುವನ್ನ ಫಟ್ ಅಂತ ಅವರ ಕೈಗಿತ್ತು ಮುದ್ದಾಡಲು ಬಿಡಿಬೇಡಿ. ಸ್ವಲ್ಪ ದೂರದಲ್ಲಿರಿಸಿ. ಅಥವಾ ಬಂದವರ ಕಣ್ಣಿಗೆ ಬೀಳದಂತೆ ಮಗುವನ್ನ ಒಳಗೇ ಬೆಚ್ಚಗೆ ಇಡಿ. ಮಗುವನ್ನೇ ನೋಡಲು ಬಂದಾಗ ಬಂದವರ ಆರೋಗ್ಯ ಸರಿ ಇದೆಯಾ ಇಲ್ವಾ ಸೂಕ್ಷ್ಮವಾಗಿ ಗಮನಿಸಿ. ಮಗು ತೋರಿಸಿದ ತಕ್ಷಣ ಏನೋ ಒಂದು ನೆವ ಮಾಡಿ ಫಟ್ ಅಂತ ಒಳಕ್ಕೆ ಕರೆದುಕೊಂಡು ಹೋಗಿಬಿಡಿ. ಮುದ್ದಾಡಲು ಕೊಡಲೇಬೇಡಿ.

ಎರಡನೇದು. ಮಗುವಿರುವ ಮನೆಗೆ ಹೋಗ್ತಿದ್ದೇನೆ ಅಂದಾಗ ನಿಮ್ಮ ಕೈ ಬಾಯಿ ಸ್ವಚ್ಛವಾಗಿದೆಯಾ ನೋಡ್ಕೊಳಿ. ಜರದಾ ಹಾಕೊಂಡೋ, ಸಿಗರೇಟ್ ಸೇದುಕೊಂಡೋ ಹಾಗೆ ಹೋಗಬೇಡಿ. ಇನ್ನೊಂದು ಮುಖ್ಯ ವಿಚಾರ. ನಿಮಗೆ ಕಾಯಿಲೆ ಇದ್ದಲ್ಲಿ ಮಗುವಿರುವ ಮನೆಗೆ ಹೋಗಲೇ ಬೇಡಿ. ಹೋದ್ರೂ ಮಗುವನ್ನ ಮುದ್ದಾಡಬೇಡಿ. ದೂರದಿಂದ್ಲೇ ಕಣ್ಣುತುಂಬಿ ಕೊಂಡು ಹರಸಿಬಿಡಿ.

ಇನ್ನೊಂದು ಇಂಪಾರ್ಟೆಂಟ್ ವಿಷ್ಯ. ಅಪ್ಪ ಅಮ್ಮ ಅಲ್ಲದೆ ಮನೆಯವರೂ ಕೂಡ ಮಗುವನ್ನ ಮುದ್ದಿಸೋ ಮೊದಲು ಸ್ವಚ್ಛವಾಗಿದ್ದೀರ ನೋಡಿಕೊಳ್ಳಿ. ಅನಾರೋಗ್ಯ ಕಾಡ್ತಿದ್ರೆ ಮಗುವಿನ ಹತ್ರಕ್ಕೆ ಹೋಗಲೇಬೇಡಿ.

ಇಷ್ಟು ಮಾಡಿದ್ರೆ ಮಗು ಸೇಫ್.

 

Please follow and like us: