ಮಕ್ಕಳನ್ನ ಇಂಥಕಡೆಗೆಲ್ಲಾ ನೀವು ಕರೆದುಕೊಂಡು ಹೋಗದಿದ್ರೆ ಹೇಗೆ!

ಶಹರದ ಮಕ್ಕಳು ಮಣ್ಣನ್ನೇ ಮರೆತುಬಿಟ್ರಾ?

ಶಹರಗಳ ಹುಟ್ಟಿನೊಂದಿಗೇ ಇಂಥದ್ದೊಂದು ಪ್ರಶ್ನೆ ಎದ್ದು ಕುಳಿತಿತ್ತಾದರೂ ಅದಕ್ಕೆ ಪರಿಹಾರ ಇನ್ನೂ ಸಿಕ್ಕಿಲ್ಲ. ಬಹುಶಃ ಸಿಗೋದು ಇಲ್ಲ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಂಕ್ರೀಟ್ ಹಾಡು ಮೈ ಚಾಚಿಕೊಂಡಿರುವಾಗ ಮಣ್ಣನ್ನ ಎಲ್ಲಿ ಹುಡುಕೋದು? ಮಕ್ಕಳಿಗೆ ಇಂಗ್ಲಿಷಿನಲ್ಲಿ soil ಅನ್ನೋ ಪದ ಗೊತ್ತು ಬಿಟ್ಟರೆ ಅದನ್ನ ಮುಟ್ಟಿ ಗೊತ್ತಿಲ್ಲ. ತಡವಿ ಗೊತ್ತಿಲ್ಲ. ಘಮ ಗೊತ್ತಿಲ್ಲ. ಮಣ್ಣಿನ ಅಂತಃಸತ್ವವಂತೂ ಗೊತ್ತೇ ಇಲ್ಲ.

ನಿಮಗೆ ಗೊತ್ತಿರಲಿ, ಕಾಂಕ್ರೀಟ್ ಕಾಡಿನಲ್ಲಿ ಮಕ್ಕಳು ಆಟವನ್ನೇ ಆಡಲ್ಲ. ಆಡಿದ್ರೂ ಅದರಿಂದ ಮಕ್ಕಳ immune system ಸ್ಟ್ರಾಂಗ್ ಆಗಲ್ಲವಂತೆ. ನೀರು ಮಣ್ಣು ಹಸಿರು ಕೆಸರು ಎಲ್ಲದರ ಜೊತೆ ಮಕ್ಕಳು ಬೆರೆತು ಆಟ ಆಡಬೇಕು. ಹಸಿರು ಬನಗಳಲ್ಲಿ ಅರಣ್ಯದಂಥಹ ಸಮೃದ್ಧ ಹಸಿರಿರುವ ವಾತಾವರಣದಲ್ಲಿ ಮಕ್ಕಳು ಆಟ ಆಡಿದ್ರೆ ಅವುಗಳ immune system ಸ್ಟ್ರಾಂಗ್ ಆಗುತ್ತೆ ಅಂತ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ನೀವು ಸಣ್ಣ ಸಣ್ಣ ಮಕ್ಕಳನ್ನ ಹಸಿರು ಹುಲ್ಲಿರುವ ಕಡೆ, ಮಣ್ಣಿರುವ ಕಡೆ, ಗಿಡಮರ ಹಕ್ಕಿಗಳ ಕಲರವ ಇರುವ ಕಡೆ ಬಿಟ್ಟುನೋಡಿ. ಅವುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಎಷ್ಟು ಚೆನ್ನಾಗಿರುತ್ತೆ ಅನ್ನೋದನ್ನ ನೀವೇ ಗಮನಿಸಿ ಅಂತಾರೆ ಸಂಶೋಧಕರು.

‘ಅಯ್ಯೋ ಮಣ್ಣು ಮುಟ್ಟಬೇಡ. ಕೈ ಗಲೀಜು ಆಗುತ್ತೆ. ಕಲ್ಲು ಎತ್ಕೊಬೇಡ. ಆ ನೀರಲ್ಲಿ ಆಟ ಆಡಬೇಡ ಪುಟ್ಟ’ ಅನ್ನೋ ನಿಸರ್ಗ ವಿರೋಧಿ ವರಾತಗಳನ್ನೆಲ್ಲಾ ಈಗಲಾದ್ರೂ ಬಿಡಿ. ಮಕ್ಕಳು ನಿಸರ್ಗದ ಜೊತೆ ಬೆರೆಯಲಿ. ಕಾಂಕ್ರೀಟ್ ಕಾಡಿನಲ್ಲೇ ಮೂರೂ ಹೊತ್ತು ಗೂಟ ಹೊಡ್ಕೊಂಡು ಕೂತಿರೋ ಬದಲು ಮಕ್ಕಳನ್ನ ಆಗಾಗ್ಗೆ ನಿಸರ್ಗದ ಮಡಿಲಿಗೆ ಕರೆದುಕೊಂಡು ಹೋಗಿ ಬನ್ನಿ.

ಆಮೇಲೆ ಅವುಗಳ ಚೈತನ್ಯ ನೋಡಿ ಹೇಗಿರುತ್ತೆ.

Please follow and like us: