ಪ್ರವಾಸಿಗರನ್ನು ಸ್ವಾಗತಿಸುತ್ತಿವೆ ‘ನೀಲಕುರಿಂಜಿ..!’

ಮುನ್ನಾರ್: ಮುನ್ನಾರ್.. ಈ ಊರಿನ ಹೆಸರನ್ನು ಕೇಳದವರೇ ಇಲ್ಲ ಬಿಡಿ. ದೇವರ ನಾಡು ಕೇರಳ ದೇವಾಲಯಗಳ ಜತೆಗೆ ಅದ್ಭುತ ಸಸ್ಯರಾಶಿಗೂ ಬಹಳ ಪ್ರಸಿದ್ಧಿ ಪಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದ, ಮನಸ್ಸಿಗೆ ಮುದ ನೀಡುವ ಮನಮೋಹಕ ಗಿರಿಧಾಮ.

ಮುನ್ನಾರ್.. ಇದೊಂದು ಪ್ರಕೃತಿ ಸೌಂದರ್ಯದ ಖನಿ.. ಸುತ್ತಲೂ ಹಚ್ಚಹಸಿರಿನ ಚಹಾ ತೋಟ, ಮಧ್ಯದಲ್ಲಿ ಇರುವೆ ಸಾಲಿನಂತಿರುವ ರಸ್ತೆ ಮಾರ್ಗ.. ತಣ್ಣಗೆ ಬೀಸಿ ಬರುವ ಗಾಳಿ.. ವ್ಹಾವ್ ಎಷ್ಟೊಂದು ಅದ್ಭುತ.. ಇಲ್ಲಿಗೆ ಭೇಟಿ ಕೊಟ್ಟವರು ಮತ್ತೆ ಮತ್ತೆ ಬರದೆ ಇರಲಾರರು. ಇದೀಗ ನೀವೇನಾದ್ರೂ ಮುನ್ನಾರ್ ಗೆ ಭೇಟಿ ಕೊಟ್ಟರೆ ವಿಶಿಷ್ಠವಾದ ನೀಲಕುರಿಂಜಿ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು.

ನೀಲಕುರಿಂಜಿಯು ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶದಲ್ಲಿ ಕಂಡು ಬರುವ ವಿನೂತನ ಸಸ್ಯವರ್ಗ. ಹೌದು, 12 ವರ್ಷದ ಬಳಿಕ ನೀಲಿ ಬಣ್ಣದ ನೀಲಕುರಿಂಜಿ ಹೂವುಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಈ ನೀಲಕುರಿಂಜಿ ಹೂವುಗಳನ್ನು ಕುರಿಂಜಿ ಅಂತಾಲೂ ಕರೆಯುತ್ತಾರೆ. 12 ವರ್ಷಕ್ಕೊಮ್ಮೆ ಕಾಣಸಿಗುವ ಈ ಹೂವುಗಳು ಜುಲೈನಿಂದ ಅಕ್ಟೋಬರ್ ವರೆಗೆ ಕಾಣಸಿಗುವು ಈ ಹೂವುಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಹಿಂದೆ ಈ ಗಿರಿಧಾಮ ಬ್ರಿಟೀಷರ ಬೇಸಿಗೆ ರೆಸಾರ್ಟ್ ಆಗಿತ್ತು. ಎರವಿಕುಲಮ್ ರಾಷ್ಟ್ರೀಯ ಉದ್ಯಾನವನ, ಅನಾಮುಡಿ ಶಿಖರ, ಲಕ್ಕಮ್ ಜಲಪಾತ ಮುಂತಾದ ಸ್ಥಳಗಳ ಸೌಂದರ್ಯವನ್ನ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

 

Please follow and like us:

Leave a Reply