ನನ್ನ ತಂದೆಯನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ!

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಇತ್ತೀಚಿಗಷ್ಟೆ ಹುತಾತ್ಮರಾಗಿದ್ದ ಪೇದೆಯ ಮಗ ಸೇನೆ ಸೇರಿ ಉಗ್ರರ ವಿರುದ್ಧ ಸೇಡು ತೀರಿಸಲು ಮುಂದಾಗಿದ್ದಾರೆ.

ನನ್ನ ತಂದೆಯನ್ನು ಕೊಂದಂತಹ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವೆ. ಹಾಗಾಗಿ ಅವರನ್ನು ಸದೆಬಡೆಯಲು ಸೇನೆ ಸೇರಲು ಇಚ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಬಟಮಾಲೂ ಪ್ರದೇಶದಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸ್ ಪೇದೆ ಪರ್ವೇಜ್ ಅಹ್ಮದ್ ಹುತಾತ್ಮರಾಗಿದ್ದರು. ಸೋಮವಾರ ನಡೆದ ಅಂತ್ಯಸಂಸ್ಕಾರ ನಡೆಯಿತು. ಕಾಶ್ಮೀರ ಸರಕಾರ ಉದ್ಯೋಗ ನಿಡುವ ಭರವಸೆ ನೀಡಿದ್ದರು, ಸೇನೆ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಪೇದೆಯ ಪುತ್ರ ಆಕ್ರೋಶದೊಂದಿಗೆ ಈ ಮಾತುಗಳನ್ನು ಹೇಳಿದ್ದಾನೆ.

Please follow and like us:

Leave a Reply