ದಿ ಗ್ರೇಟ್ Hall

ಆಕ್‌ಸ್ರ್ಡ್ ನಗರದ ವಿಶ್ವ ವಿಖ್ಯಾತ ಕ್ರೆûಸ್‌ಟ್ ಚರ್ಚ್ ಕಾಲೇಜಿನ ಪರಿಚಯದ ಅಗತ್ಯವಿಲ್ಲ. ಈ ಕಾಲೇಜಿನ ಜೀವನ ಕೇಂದ್ರವೆನಿಸಿರುವ ದ ಗ್ರೇಟ್ ಹಾಲ್‌ನ ಚಿತ್ರ ಇದು.  ಶೈಕ್ಷಣಿಕ ಸಮುದಾಯ ಇಲ್ಲಿ ಪ್ರತಿದಿನ ಉಪಹಾರ ಮತ್ತು ಭೋಜನಗಳಿಗೆ ಒಟ್ಟಾಗಿ ಸೇರುತ್ತದೆ.   ಸಂದರ್ಭಗಳಲ್ಲಿ ಇಲ್ಲಿ ಔತಣಕೂಟಗಳೂ ನಡೆಯುತ್ತವೆ.  ಸರಿಸುಮಾರು 1520ರಲ್ಲಿ ನಿರ್ಮಾಣಗೊಂಡ, ರೆನೈಸಾನ್‌ಸ್ ಕಾಲದ ವೈಭವ ಸಾರುವಂತಿರುವ, ಮುನ್ನೂರು ಆಸನಗಳ, ಈ ಭೋಜನಾಲಯ 1870ರ ತನಕ ಆಕ್‌ಸ್ರ್ಡ್‌ನ ಅತ್ಯಂತ ದೊಡ್ಡ ಹಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.  ಹದಿನಾರನೆಯ ಶತಮಾನದಲ್ಲಿ ಆರಂಭಗೊಂಡ ಈ ಭೋಜನಾಲಯ ಅಂದಿನಿಂದ ಇಂದಿನ ತನಕ ನಿರಂತರ ಬಳಕೆಯಲ್ಲಿರುವುದು ಇದರ ವಿಶೇಷತೆ.

ಎತ್ತರದ ಒಳತಾರಸಿಯ ಹ್ಯಾಮರ್‌ಬೀಮ್ ವಿನ್ಯಾಸ ಗಮನಸೆಳೆಯುತ್ತದೆ.  ಅನೇಕ ಖ್ಯಾತನಾಮರ ವರ್ಣಚಿತ್ರಗಳು ಹಾಲ್‌ನ ಗೋಡೆಗಳನ್ನಲಂಕರಿಸಿವೆ.  ಈ ಕಾಲೇಜಿನಲ್ಲಿ ಅಧ್ಯಯನ  ಹದಿಮೂರು ವಿದ್ಯಾರ್ಥಿಗಳು ದೇಶದ ಪ್ರಧಾನ ಮಂತ್ರಿ ಹುದ್ದೆಗೇರಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.  ಇವರಲ್ಲಿ ಹಲವರ ಭಾವಚಿತ್ರಗಳೂ ಇಲ್ಲಿ ಸ್ಥಾನ ಪಡೆದಿವೆ.  ಹಾಲ್‌ನ ಒಂದು ತುದಿಯಲ್ಲಿರುವ ಹೈ ಟೇಬಲ್ ಕಾಲೇಜಿನ ಹಿರಿಯ ಸದಸ್ಯರಿಗೆ ಮೀಸಲಾಗಿದೆ.

ಹೆಸರಾಂತ ಲೇಖಕ ಲುಯಿಸ್ ಕೆರೂಲ್ ವಿರಚಿತ ಆಲಿಸ್ ಇನ್ ವಂಡರ್‌ಲ್ಯಾಂಡ್ ಕೃತಿಗಳಲ್ಲಿ ಈ ಹಾಲ್ ಚಿರಂತನವಾಗಿದೆ.  ಹ್ಯಾರಿ ಪಾಟರ್ ಚಿತ್ರದ ಹಾಗ್ವರ್ಟ್‌ಸ್ ಸ್ಕೂಲ್‌ನ ಭೋಜನ ಶಾಲೆಯ ಚಿತ್ರೀಕರಣಕ್ಕಾಗಿ ಸ್ಟುಡಿಯೋದಲ್ಲಿ ಈ ಹಾಲ್‌ನ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು.

Please follow and like us:

Leave a Reply