ದಿನಕ್ಕೆ ಹನ್ನೊಂದು ಗಂಟೆಗಿಂತ ಹೆಚ್ಚು ಒಂದೇ ಕಡೆ ಕೂತಿರ್ತೀರಾ?

-ಜಗತ್ತಿನಲ್ಲಿ ಥೇಟ್ ನಿಮ್ಮ ಥರಾನೆ ಇರುವಂಥವರು ಆರು ಜನ ಇದ್ದೇ ಇರ್ತಾರಂತೆ. ಜೀವಿತಾವಧಿಯಲ್ಲಿ ಅವರನ್ನ ನೀವು0 ಭೇಟಿಯಾಗುವ ಛಾನ್ಸ್ ಜಸ್ಟ್ ಒಂಬತ್ತು ಪರ್ಸೆಂಟ್.

-ಮೇಡ್ ಇನ್ ಚೈನಾ ಅನ್ನುವ ಸ್ಟಿಕ್ಕರ್ ನೋಡಿದೀರಲ್ಲ ಅದು ತಯಾರೋಗೋದು ಕೊರಿಯಾದಲ್ಲಿ.

-ಹದಿನೈದು ನಿಮಿಷಕ್ಕಿಂತ ಹೆಚ್ಚು ಕಾಲ ಏನೂ ಮಾಡದೆ ಸುಮ್ಮನೆ ಕೂತ್ರೆ ಸಾಕು ನಿದ್ರೆಗೆ ಜಾರುತ್ತೀರಿ.

-ಒಂದು ದಿನದಲ್ಲಿ ಜಗತ್ತಿನ ಜನ ಸೇದುವ ಸಿಗರೇಟ್ ಗಳ ಸಂಖ್ಯೆ ಸುಮಾರು ಸಾವಿರದ ಐದುನೂರು ಕೋಟಿ.

-ಸಿಕ್ಕಾಪಟ್ಟೆ ಇಂಟರ್ನೆಟ್ ಬಳಸಿದ್ರೆ ನಮ್ಮ ಮಿದುಳು ಲೇಜಿ ಆಗುತ್ತಂತೆ.

-ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಸರಾಸರಿ ನಾಲ್ಕು ಸುಳ್ಳು ಹೇಳ್ತಾನಂತೆ. ಅಂದ್ರೆ ವರ್ಷಕ್ಕೆ 1460 ಅಂತಿಟ್ಕೊಳಿ. ಅದರಲ್ಲಿ ಕಾಮನ್ ಆಗಿ ಹೇಳೋ ಸುಳ್ಳು  ಯಾವುದು ಗೊತ್ತಾ? I am fine.

-ಜಿರಾಫೆ ನಾಲಗೆಯ ಉದ್ದ ಸುಮಾರು 21 ಇಂಚು ಇರುತ್ತೆ.

-ಹಣ್ಣಾಗಿರೋ ಬಾಳೆ ಹಣ್ಣನ್ನ ಇನ್ನೂ ಕಾಯಿ ಇರೋ ಟೊಮೊಟೋ ಪಕ್ಕ ಇಟ್ರೆ ಸಾಕು ಟೊಮೋಟೋ ರಾತ್ರೋ ರಾತ್ರಿ ಹಣ್ಣಾಗಿಬಿಡುತ್ತಂತೆ. ಅದಕ್ಕೆ ಕಾರಣ ಬಾಳೆಹಣ್ಣಿನಲ್ಲಿರೋ ಎಥಿಲೀನ್ ಗ್ಯಾಸ್.

– ಶೇಕಡ ಏಳರಷ್ಟು ಅಮೆರಿಕನ್ನರು ಚಾಕೊಲೇಟ್ ಮಿಲ್ಕ್ ಕಂದು ಬಣ್ಣದ ಹಸುವಿನಿಂದ ಬರುತ್ತೆ ಅಂತಾನೆ ನಂಬಿದ್ದಾರೆ.

-ಯಾರು ದಿನಕ್ಕೆ ಹನ್ನೊಂದು ಗಂಟೆಗಿಂತ ಹೆಚ್ಚು ಒಂದೇ ಕಡೆ ಕೂತಿರ್ತಾರೋ ಅವರು ಮುಂದಿನ ಮೂರು ವರ್ಷದಲ್ಲಿ ಗೊಟಕ್ ಅಂತಾರೆ.

Please follow and like us: