ಕೋಳಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ!

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಾರನಹಳ್ಳಿಯಲ್ಲಿ ಕೋಳಿ ಬೇಟೆಯಾಡಲು ಹೋಗಿ ಚಿರತೆಯೊಂದು ಪಾಳು ಬಾವಿಗೆ ಬಿದ್ದಿದೆ.

ಆಹಾರ ಅರಸಿ ಬಂದಿದ್ದ ಚಿರತೆ, ಕೋಳಿ ಹಿಡಿಯಲು ಹೋಗಿ ಬೆಟ್ಟೇಗೌಡ ಎಂಬುವವರ ಜಮೀನಿನ ಸಮೀಪ ಇರುವ ಬಾವಿಗೆ ಬಿದ್ದಿದೆ. ದಾರಿಹೋಕರು ಬಾವಿಯಿಂದ ಏನೋ ಶಬ್ದ ಬರುತ್ತಿದೆ ಎಂದು ಹೋಗಿ ನೋಡಿದಾಗ ಬಾವಿಗೆ ಚಿರತೆ ಬಿದ್ದಿರುವುದು ಕಂಡುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಚಿರತೆ ನೋಡಲು ಸುತ್ತ ಮುತ್ತಲ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬಾವಿಯೊಳಗೆ ಬಲೆ ಹಾಕಿ ಚಿರತೆ ಸೆರೆಹಿಡಿದು, ಬಾವಿಯಿಂದ ಮೇಲೆತ್ತಿ ತಂದಿದ್ದ ಬೋನಿಗೆ ಅರಣ್ಯಕ್ಕೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಬಿಟ್ಟು ಬಂದರು.

Please follow and like us:

Leave a Reply