ಕೊರೋನ ಅಂದ್ರೆ ಉಡಾಫೆ ಮಾಡೋರು ಪ್ಲೀಸ್ ಈ ಸ್ಟೋರಿ ಓದಿ!

ಈತನ ಹೆಸರು ಡಿಮಿಟ್ರಿಯ್ ಸ್ಟುಜಾಕ್. ಜಸ್ಟ್ ಮೂವತ್ತ ಮೂರು ವರ್ಷದ ಸುರಸುಂದರಾಂಗ. ಹೆಣ್ಮಕ್ಕಳಂತೂ ಇವನ ದೇಹದಾರ್ಡ್ಯಕ್ಕೆ ಫಿದಾ ಆಗಿಹೋಗಿದ್ರು. ಇಂಟರ್ನೆಟ್ ನಲ್ಲಿ ಇವನ ಫಾಲೋವರ್ಸ್ ಬರೋಬ್ಬರಿ ಒಂದು ಮಿಲಿಯನ್.

ಅಂದ್ರೆ ಸ್ಟುಜಾಕ್ ಒಂಥರಾ ಫಿಟ್ನೆಸ್ ಗುರು ಥರ ಇದ್ದ. ದೇಹವನ್ನ ಕಲ್ಲಿನಹಾಗೆ ಹುರಿಗೊಳಿಸಿ ಇಟ್ಟುಕೊಂಡಿದ್ದ. ಅತ್ಯಂತ ಸ್ಫುರದ್ರೂಪಿ. ಸ್ಪೋರ್ಟ್ಸ್ ಫಿಟ್ನೆಸ್ ಮತ್ತು ಹೆಲ್ದಿ ಲೈಫ್ನ ಪ್ರಮೋಟ್ ಮಾಡ್ತಿದ್ದ. ಆತ ಮಾಡಿದ್ದ ಬಹುದೊಡ್ಡ ಯಡವಟ್ಟೆಂದರೆ ಕೊರೋನಾ ಬಗ್ಗೆ ಉಡಾಫೆ ಮಾಡಿದ್ದು.

ಆಕ್ಚ್ಯುಯಲಿ  ಕೊರೋನಾ ವೈರಸ್ ಅನ್ನೋದೆ ಈ ಜಗತ್ತಿನಲ್ಲಿ ಇಲ್ಲ ಅಂತ ಸ್ಟುಜಾಕ್ ನಿರ್ಲಕ್ಷ್ಯ ಮಾಡಿದ್ದ. ದುರಂತ ನೋಡಿ ಅದೇ ಕೊರೋನಾ ವೈರಸ್ ಗೆ ಈಗ ಆತ ಬಲಿಯಾಗಿದ್ದಾನೆ. ಟರ್ಕಿಗೆ ಟ್ರಿಪ್ ಹೋಗಿ ಬಂದ ಮೇಲೆ ಸ್ಟುಜಾಕ್ ಗೆ  ಕೊರೋನಾ ವೈರಸ್ ಸೋಂಕು ತಗಲಿತ್ತು. ಆಸ್ಪತ್ರೆ ಸೇರಿದ್ದ ಸ್ಟುಜಾಕ್ ತನ್ನ ಫ್ಯಾನ್ ಗಳಿಗೆ ಈ ರೀತಿ ಹೇಳಿದ್ದ.

‘ಸೋಂಕು ತಗಲುವವರೆಗೆ ಜಗತ್ತಿನಲ್ಲಿ ಕೊರೋನಾ ಇದೆ ಅಂತಾನೆ ನನಗನಿಸಿರಲಿಲ್ಲ. ಇದೊಂದು ಭಯಾನಕ ಕಾಯಿಲೆ.’

ಒಂದು ವಾರ ಆಸ್ಪತ್ರೆಯಲ್ಲಿದ್ದ ಸ್ಟುಜಾಕ್ ಪರವಾಗಿಲ್ಲ, ಚೇತರಿಸಿಕೊಳ್ತಿದ್ದೇನೆ ಅಂತ ಮನೆಗೆ ಹೋಗಿದ್ದ. ಹೋದವನೆ ಮತ್ತೆ ಸೀರಿಯಸ್ ಅಂತ ವಾಪಸ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ.

ಮಾಜಿ ಹೆಂಡ್ತಿ ಸೋಫಿಯಾ ಇವತ್ತು ಅವನ ಸಾವನ್ನ ಅನೌನ್ಸ್ ಮಾಡಿದ್ದಾಳೆ.

ದಯವಿಟ್ಟು ಯಾರೂ ಕೊರೋನಾನ ಕಡೆಗಣಿಸಬೇಡಿ. ಅಯ್ಯೋ ಅದೇನು ಮಾಡುತ್ತೆ ಬಿಡು ಅನ್ನೋ ನಿರ್ಲಕ್ಷ್ಯ ಬೇಡವೇ ಬೇಡ. ಮಾಸ್ಕ್ ಇಲ್ಲದೆ ಓಡಾಡಲೇಬೇಡಿ. ಕೈ ತೊಳೆಯೋದನ್ನ ಮರಿಬೇಡಿ.

ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯಗೆಡಬೇಡಿ.

ಪ್ಲೀಸ್.

     ಆರ್ ಎ

 

Please follow and like us: