ಉಳಿದ ಐವತ್ತೊಂದು ವರ್ಷದಲ್ಲಿ ಈ ಬುದ್ಧಿವಂತ ಏನೇನು ಮಾಡ್ತಾನೋ!

 

 

ಎಲನ್ ಮಸ್ಕ್ ಅನ್ನೋ ಕನಸುಗಾರನ ಹೆಸರು ನೀವು ಕೇಳಿರಬಹುದು. ಕೇಳದೆಯೂ ಇರಬಹುದು. ನಮ್ಮ ದೇಶದಲ್ಲಿ ಆತನ ಹೆಸರು ಕಿವಿಗೆ ಬಿದ್ದಿದ್ದು ಅಷ್ಟಕ್ಕಷ್ಟೆ. ಆದರೆ ಪಾಶ್ಚಾತ್ಯ ದೇಶಗಳ ಯುವಜನತೆಗೆ ಎಲನ್ ಮಸ್ಕ್ ಅಂದ್ರೆ ಒಬ್ಬ ಜೀನಿಯಸ್. ಅದ್ಭುತ ಕನಸುಗಾರ. ಮಸ್ಕ್ ಎಂಥೆಂಥ ಬೃಹತ್  ಕನಸುಗಳನ್ನ ಕಂಡಿದ್ದಾನೆ ಅಂದ್ರೆ ಅವನ್ನೆಲ್ಲಾ ನಾವು ನೀವು ಊಹೆ ಕೂಡ ಮಾಡಿಕೊಳ್ಳಲು ಅಸಾಧ್ಯ. ಹಾಗೆ ನೋಡಿದ್ರೆ ಅಸಾಧ್ಯವಾದದ್ದನ್ನ ಸಾಧಿಸುವುದೇ ಎಲನ್ ಮಸ್ಕ್ ಗುರಿ. ಆತ ತನ್ನ  ಕನಸುಗಳನ್ನು ಸಾಕಾರ ಮಾಡುವ ಮೂಲಕ ಜಗತ್ತಿನ ಚಿತ್ರಣವನ್ನೇ ಚೇಂಜ್ ಮಾಡಲು ಹೊರಟಿದ್ದಾನೆ. 21ನೇ ಶತಮಾನದ ಅದ್ಭುತ ತಲೆಗಳಲ್ಲಿ ಎಲನ್ ಮಸ್ಕ್ ತಲೆಯೂ ಒಂದು.

2002ರಲ್ಲಿ ಎಲನ್ ಮಸ್ಕ್ SpaceX ಅನ್ನುವ ಒಂದು ಕಂಪನಿ ಶುರುಮಾಡ್ತಾನೆ. ಅದರ ಉದ್ದೇಶ ಕಂಡೇ ಜಗತ್ತಿನ ದೊಡ್ ದೊಡ್ಡ ಸೈಂಟಿಸ್ಟ್ ಗಳೆಲ್ಲಾ ಗಾಬರಿ ಬಿದ್ದೋಗಿದ್ರು. ಏನಪ್ಪಾ ಅಂದ್ರೆ ನಾವು ಮಂಡ್ಯ ಟು ಬೆಂಗಳೂರು ಪ್ರೈವೆಟ್ ಬಸ್ ಓಡಿಸ್ತೀವಲ್ಲ ಹಾಗೆ ಮಂಗಳ ಗ್ರಹಕ್ಕೂ ಭೂಮಿಗೂ ಮಧ್ಯೆ ರಾಕೆಟ್ ಮೂಲಕ ಟ್ರಿಪ್ ಹೊಡೆಯೋದು ಅವನ ಗುರಿ. ಅದೂ ಏನೂ ರೀ  ಯೂಸಬಲ್  ರಾಕೆಟ್ ಬಳಸಿಕೊಂಡು. ಇದುವರೆಗೂ NASA  ಒಂದು ಸಲ ರಾಕೆಟ್ ಉಡಾವಣೆ ಮಾಡಿ ಆಮೇಲೆ ಅದನ್ನು ಬಿಸಾಕ್ತಿತ್ತು. ಅದರ ಮರುಬಳಕೆ ಆಗ್ತಿರಲಿಲ್ಲ. ಈಗ ಅದನ್ನ ಮಸ್ಕ್ ಸಾಧ್ಯ ಮಾಡಿ ತೋರಿಸ್ತಿದ್ದಾನೆ.

ನೋಡ್ತಾ ಇರಿ  ಒಂದಿನ ಮಸ್ಕ್ ಜನರನ್ನು ತುಂಬಿಕೊಂಡು ಮಂಗಳ ಗ್ರಹಕ್ಕೆ ಹೋಗೇ ಹೋಗ್ತಾನೆ . ಆ ಕೆಲಸ ಭರದಿಂದ ನಡಿತಿದೆ.

ಹೈಪರ್ ಲೂಪ್ ಟ್ರೈನ್ ಎಲನ್ ಮಸ್ಕ್ ನ ಇನ್ನೊಂದು ಕನಸು. ಅತ್ಯದ್ಭುತವಾದ ಕನಸು. ಭೂಮಿ ಮೇಲೆ ಗಂಟೆಗೆ ಬರೋಬ್ಬರಿ 1300 ಕಿಲೋಮೀಟರ್ ವೇಗದಲ್ಲಿ ಆ ಟ್ರೈನ್ ಸಂಚರಿಸಬಲ್ಲದು. ನಿಮಗೆ ಗೊತ್ತಿದೆ, ಬೆಂಗಳೂರಿನಿಂದ ಮೈಸೂರಿಗೆ ನೂರಾ ಐವತ್ತು ಕಿಲೋಮೀಟರ್ ದೂರ ಇದೆ. ಅಷ್ಟು ದೂರ  ಟ್ರಾವೆಲ್ ಮಾಡಲು ಹೈಪರ್ ಲೂಪ್ ನಲ್ಲಿ ಜಸ್ಟ್ ಅಂದ್ರೆ ಜಸ್ಟ್ ಏಳು ನಿಮಿಷ ಸಾಕು.

ಇದು ಕೂಡ ಫಾಸ್ಟ್ ಆಗಿ ರೆಡಿ ಆಗ್ತಿದೆ.

ಎಲನ್ ಮಸ್ಕ್ ನ ಇನ್ನೊಂದು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ Neuralink . ಮನುಕುಲದ ಯೋಚನೆಯನ್ನೇ ಬದಲಿಸುವಂಥ ಬಿಗ್ ಬಿಗ್ ಪ್ರಾಜೆಕ್ಟ್. ನ್ಯೂರಾಲಿಂಕ್ ಮೂಲಕ ಮಸ್ಕ್ ಮೈಕ್ರೋ ಕಂಪ್ಯೂಟರ್ ಗಳನ್ನ ತಯಾರಿಸ್ತಾನೆ. ನಿಮಗೆ ಇನ್ನೂ ಸುಲಭವಾಗಿ ಹೇಳೋದಾದ್ರೆ ನಮ್ಮ ಮಿದುಳನ್ನ ಡೈರೆಕ್ಟ್ ಆಗಿ ಕಂಪ್ಯೂಟರ್ ಗೆ ಕನೆಕ್ಟ್ ಮಾಡೋ ಕೆಲಸ ನ್ಯೂರಾಲಿಂಕ್ ನಲ್ಲಿ ಆಗ್ತಿದೆ.

ಇದು ಕ್ರಾಂತಿಕಾರಿ ಐಡಿಯಾ ತಾನೆ.

ಇದರ ಜೊತೆಗೆ ಸೌರಶಕ್ತಿ ಆಧಾರಿತ ವಿದ್ಯುತ್ ಬಳಸಲು ಸೋಲಾರ್ ಸಿಟಿ ಪ್ರಾಜೆಕ್ಟ್ ಆರಂಭಿಸಿದ್ದಾನೆ. ಮೆಗಾ ಸಿಟಿಗಳ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಬೋರಿಂಗ್ ಕಂಪನಿ ಶುರು ಮಾಡಿದ್ದಾನೆ. ಭವಿಷ್ಯದ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರ್ ಗಳನ್ನ  Tesla ಕಂಪನಿ ಮೂಲಕ ತಯಾರಿಸುತ್ತಿದ್ದಾನೆ.

ಒಂದಾ ಎರಡಾ ಅವನ ಕನಸುಗಳು.

ಈಗ ನೋಡಿದ್ರೆ ಇನ್ನೊಂದು ಎಕ್ಸ್ ಟ್ರಾರ್ಡಿನರಿ  ಪ್ರಾಜೆಕ್ಟ್ ಗೆ  ಕೈ ಹಾಕಿದ್ದಾನೆ. ಅದೇ ವಿಮಾನಗಳ ಮೂಲಕ ಕಷ್ಟಪಟ್ಟು ಸಾಗಿಸುತ್ತಿದ್ದ ಸರಕು ಸಾಮಾನುಗಳನ್ನ ರಾಕೆಟ್ ಮೂಲಕ ಅತ್ಯಂತ ವೇಗವಾಗಿ ತಲುಪಿಸುವ ಪ್ರಾಜೆಕ್ಟ್.

ಎಕ್ಸಾಂಪಲ್ ಹೇಳೋದಾದ್ರೆ, ಬೋಯಿಂಗ್ ಸಿ 17 ಗ್ಲೋಬ್ ಮಾಸ್ಟರ್-3 ಅನ್ನೋ ಮಿಲಿಟರಿ ವಿಮಾನಗಳು ಅಮೆರಿಕದ ಬಳಿ ಇವೆ. ಅವು ಗಂಟೆಗೆ 590 ಮೈಲು ವೇಗದಲ್ಲಿ ಹಾರುತ್ತವೆ. 590 ಮೈಲು ಅಂದ್ರೆ ಗಂಟೆಗೆ 950 ಕಿಲೋಮೀಟರ್ ವೇಗ. ಇಂಥ ಮಿಲಿಟರಿ ಏರ್ ಪೋರ್ಟ್ ವಿಮಾನವೂ ಫ್ಲೋರಿಡಾದಿಂದ ಅಫಘನಿಸ್ತಾನಕ್ಕೆ ಕಾರ್ಗೋ ತಲುಪಿಸಲು ಹದಿನೈದು ಗಂಟೆ ಬೇಕು. ಆದ್ರೆ ಎಲನ್ ಮಸ್ಕ್ ಇಟ್ಟಿರುವ ಪ್ರಪೋಸಲ್ ಪ್ರಕಾರ ಸ್ಪೇಸ್ ಎಕ್ಸ್ ಜಸ್ಟ್ ಒಂದೇ ಒಂದು ಗಂಟೆಯಲ್ಲಿ ರಾಕೆಟ್ ಮೂಲಕ ಕಾರ್ಗೊವನ್ನ ಫ್ಲೋರಿಡಾದಿಂದ ಅಫಘನಿಸ್ತಾನಕ್ಕೆ ತಲುಪಿಸಬಲ್ಲದು. ಯುದ್ಧರಂಗಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನೂ ಅತ್ಯಂತ ತುರ್ತಾಗಿ ತಲುಪಿಸಬಲ್ಲದು.

ಮಸ್ಕ್ ತಲೆಯಲ್ಲಿ ಇನ್ನೂ ಏನೇನು ಐಡಿಯಾಗಳಿವೆಯೋ! ಈ ಮನುಷ್ಯ ಇನ್ನೂ ಏನೇನು ಬದಲಾಯಿಸ್ತಾನೋ! ಎಲನ್ ಮಸ್ಕನ್ನ 21ನೇ ಶತಮಾನದ ಥಾಮಸ್ ಎಡಿಸನ್ ಅಂತ ಕರಿತಾರೆ. ಒಂದೇ ವಾಕ್ಯದಲ್ಲಿ ಎಲನ್ ಮಾಸ್ಕನ್ನ ಬಣ್ಣಿಸೋದಾದ್ರೆ A Man Of Many Dreams.

ಇಷ್ಟಕ್ಕೂ ಈ ಎಲನ್ ಮಸ್ಕ್ ಯಾರು?

ಎಲನ್ ಮಸ್ಕ್ ಸೌತ್ ಅಮೆರಿಕದ ಪ್ರಿಟೋರಿಯಾದಲ್ಲಿ 1971ರಲ್ಲಿ ಜನಿಸಿದವನು. ಅಮ್ಮಾ ಮಾಡೆಲ್. ಕೆನಡಾ ಮೂಲದವಳು. ಅಪ್ಪ ಎಲೆಕ್ಟ್ರೋಮೆಕ್ಯಾನಿಕಲ್ ಇಂಜಿನಿಯರ್, ಪೈಲಟ್, ಪ್ರಾಪರ್ಟಿ ಡೆವಲಪರ್. 1980ರಲ್ಲಿ ಮೇಯೆ ಮಸ್ಕ್ ಮತ್ತು ಎರಲ್ ಮಸ್ಕ್ ಇಬ್ಬರೂ ಡಿವೋರ್ಸ್ ಆದಮೇಲೆ ಹುಡುಗ ಮಸ್ಕ್,  ಪ್ರಿಟೋರಿಯಾದಲ್ಲೇ ಅಪ್ಪನ ಜೊತೆಯಲ್ಲಿರ್ತಾನೆ. ಸಿಕ್ಕಾಪ್ಟಟೆ ಓದುವ ಹುಚ್ಚು. ಜಸ್ಟ್ ಹನ್ನೆರಡು ವರ್ಷಕ್ಕೆ ಕಂಪ್ಯೂಟರ್ ವಿಡಿಯೋ ಗೇಮ್ ರೆಡಿ ಮಾಡಿ ಮಾರಿದ್ದ ಬ್ರಿಲಿಯಂಟ್  ಎಲನ್ ಮಸ್ಕ್ ಅಂದ್ರೆ ನಂಬ್ತೀರ. ಹದಿನೆಂಟನೇ ವರ್ಷದ ಬರ್ತ್ ಡೇಗೆ ಮುನ್ನ ಅಪ್ಪ ಬೇಡ ಅಂದ್ರೂ ಕೆನಡಾಗದ ಬಾಗಿಲು ತಟ್ಟುತ್ತಾನೆ. ಅಲ್ಲಿಂದ ಅಮೆರಿಕ. ಅವನಿಗೆ ಗೊತ್ತಿತ್ತು ಅಮೆರಿಕ ಕನಸುಗಾರರ ನಗರ. ಅಲ್ಲಿ ಏನನ್ನಾದರೂ ಸಾಧಿಸಬಹುದು ಅಂತ.

1995ರಲ್ಲಿ ಎಲನ್ ಮಸ್ಕ್ ತನ್ನ ಸಹೋದರ ಮತ್ತು ಗ್ರೆಗ್ ಕೌರಿ ಜತೆ ಸೇರಿ  Zip2 ಅನ್ನುವ ವೆಬ್ ಸಾಫ್ಟ್ ವೇರ್ ಕಂಪನಿ ಶುರು ಮಾಡ್ತಾನೆ. ಅಲ್ಲಿಂದ ಆತ ತಿರುಗಿನೋಡಿದ್ದೇ ಇಲ್ಲ.ಈಗ ಎಲನ್ ಮಸ್ಕ್ ಎಷ್ಟು ಶ್ರೀಮಂತ ಅಂದ್ರೆ ಆತನ ಒಟ್ಟು ಆಸ್ತಿಯ  ಮೌಲ್ಯ ಒಂಭತ್ತು ಸಾವಿರದ ಮುನ್ನೂರ ಎಪ್ಪತ್ತು ಕೋಟಿ ಅಮೆರಿಕನ್ ಡಾಲರ್ ಅಂತಿದೆ ಗೂಗಲ್.

ಮೂರು ಜನ ಹೆಂಡ್ತಿಯರು. ಒಬ್ಬಳು ಮೂರು ವರ್ಷ. ಎರಡನೆಯವಳು ಎರಡು ವರ್ಷ. ಮೂರನೆಯಾಕೆ ಎಂಟು ವರ್ಷ ಜೊತೆಯಲ್ಲಿದ್ದದ್ದೇ ಹೆಚ್ಚು.  ಮಕ್ಕಳು ಏಳು. ಅದರಲ್ಲಿ ಕೊನೆ ಹೆಂಡ್ತಿಯ ಮಗುವಿನ ಹೆಸರು X Æ A-Xii.

ವಯಸ್ಸು ಜಸ್ಟ್ 49 ವರ್ಷ ಅಷ್ಟೆ.

ಉಳಿದ ಐವತ್ತೊಂದು ವರ್ಷದಲ್ಲಿ ಈ ಬುದ್ಧಿವಂತ ಭೂಮಿ ಮತ್ತು ಆಕಾಶದಲ್ಲಿ ಏನೇನು ಬದಲಾವಣೆ ಮಾಡ್ತಾನೋ.

ನೋಡಲು ಜಗತ್ತು ಕಾದು ಕೂತಿದೆ.

ರವಿ ಅಜ್ಜೀಪುರ

Please follow and like us: