ಈ ಹುಡುಗಿ ಕಾಲಿನ ಎತ್ತರ ಎಷ್ಟು ಗೊತ್ತಾ? ಆಕ್ಚ್ಯುಯಲಿ ಕೆಲವರು ಇವಳ ಕಾಲಿನಷ್ಟೂ ಹೈಟ್ ಇಲ್ಲ!

ಸೊಂಟದಿಂದ ಉಂಗುಷ್ಟದ ತನಕ ನಿಮ್ಮ ಕಾಲು ಎಷ್ಟುದ್ದ ಇರಬಹುದು, ಯಾವಾತ್ತಾದ್ರೂ ಅಳತೆ ಮಾಡಿದ್ದೀರಾ? ಹೋಗಲಿ ನನ್ನ ಕಾಲು ಎಷ್ಟುದ್ದ ಇರಬಹುದು ಅಂತ ಕುತೂಹಲಕ್ಕಾದರೂ ಯೋಚಿಸಿದ್ದೀರಾ? ನೆವರ್ ಅಲ್ವ. ಕಾಲಿರೋದೆ ನಡೆಯಲಿಕ್ಕೆ. ನಮ್ಮನ್ನು ಹೊರಲಿಕ್ಕೆ. ಅದರ ಬಗ್ಗೆ ಯಾಕೆ ಅಷ್ಟೊಂದು ಕಾಳಜಿ ಅಂತ ಕಾಲಿನ ಬಗ್ಗೆ ಅಪಾರ ನಿರ್ಲಕ್ಷ್ಯ ತೋರಿದವರೇ ಹೆಚ್ಚು. ಹಾಗಾಗಿ ಕಾಲು ಸದಾ ದುಃಖಿ. ಹೊತ್ತುಕೊಂಡು ಮೆರೆದರೂ ನನಗೆ ಸಿಗಬೇಕಾದ ಮಿನಿಮಮ್ ಗೌರವ ಕೂಡ ಸಿಕ್ಕಿಲ್ಲ ಅನ್ನೋದು ಅದರ ಗತಕಾಲದ ಕೊರಗು.

ಯಾಕೆ ಈಗ ಜಸ್ಟ್ ಕಾಲಿನ ಬಗ್ಗೆಯೇ ಮಾತಾಡ್ತಿದೀನಿ ಅಂದ್ರೆ ಟೆಕ್ಸಾಸ್ ನಲ್ಲಿ Maci Currin  ಅನ್ನುವ ಹದಿನೇಳು ವರ್ಷದ ಒಬ್ಬಳು ಚೆಲುವೆ ಇದ್ದಾಳೆ. ನೋಡಲು ಥೇಟ್ ತೆಂಗಿನ ಮರ. ಅಲ್ಲ ರೀ ಈ ಮ್ಯಾಕಿ ಎತ್ತರ ಎಷ್ಟು ಅಂತ ನಿಮಗೇನಾದರೂ ಗೊತ್ತಾ? ಬರೋಬ್ಬರಿ ಆರು ಅಡಿ ಹತ್ತು ಇಂಚು ಎತ್ತರ ಇದಾಳೆ. ಅವಳು ಎಲ್ಲರನ್ನೂ ತಲೆ ತಗ್ಗಿಸಿಯೇ ನೋಡಬೇಕು. ನಾವು ಅವಳನ್ನ ತಲೆ ಎತ್ತಿಯೇ ನೋಡಬೇಕು. ಒಂಥರಾ ಆಕಾಶದೆತ್ತರ ಬೆಳೆದವ್ಳೆ ಅಂತಾರಲ್ಲ ಥೇಟ್ ಹಾಗೇ ಬೆಳೆದವಳೆ.

ಆರು ಅಡಿ ಹತ್ತು ಇಂಚು ಎತ್ತರ ಬೆಳೆದ ಮ್ಯಾಕಿಯ ಕಾಲುಗಳ ಉದ್ದವೇ ನಾಲ್ಕು ಅಡಿ ಎಂಟು ಇಂಚು. ನಿಜ  ಹೇಳಬೇಕು ಅಂದ್ರೆ ಜಗತ್ತಿನ ಬಹುತೇಕ ಜನ ಮ್ಯಾಕಿ ಕಾಲಿನಷ್ಟು ಹೈಟೂ ಇಲ್ಲ. ತನ್ನ ಉದ್ದ ಕಾಲಿಗಾಗಿಯೇ ಮ್ಯಾಕಿ ಫೇಮಸ್ ಆಗಿದ್ದಾಳೆ. ‘ಜಗತ್ತಿನ ಉದ್ದ ಕಾಲಿನ ಒಡತಿ’ ಅಂತ ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದ್ದಾಳೆ.

ಮ್ಯಾಕಿಯ ದೇಹದ ಆರು ಅಡಿ ಹತ್ತು ಇಂಚು ಒಟ್ಟು ಎತ್ತರದಲ್ಲಿ ಅರವತ್ತು ಪರ್ಸೆಂಟ್ ನಷ್ಟು ಕಾಲೇ ಆಕ್ರಮಿಸಿಕೊಂಡಿದೆ. ನೋಡಿದ್ರೆ ಇವಳೇನು ಮರದ ಕಾಲು ಕಟ್ಟಿಕೊಂಡು ನಡಿತಾಳೇನೋ ಅನ್ನೋ ಡೌಟು ಬಾರದೆ ಇರದು. ಒಂದು ಸಲ ಚಿತ್ರ ನೋಡಿ ನಿಮಗೆ ಗೊತ್ತಾಗುತ್ತೆ.

ಮ್ಯಾಕಿ ಹೈಟು ಆಕೆಗೆ ಕೆಲವೊಮ್ಮೆ ವರವಾದರೆ ಕೆಲವೊಮ್ಮೆ ಶಾಪವೂ ಹೌದಂತೆ. ಇವಳು ಎತ್ತರದಲ್ಲಿ ಏನಿದ್ರೂ ಈಜಿಯಾಗಿ ತಗೊತಾಳೆ. ಕೆಳಗಡೆ ಇಟ್ಟಿರೋದು ತಗೊ ಅಂದ್ರೆ ಮಾತ್ರ ಕಷ್ಟಕಷ್ಟ. ಕುಳ್ಳಕ್ಕಿರೋರು ಏಣಿ ಹಾಕೊಂಡು ಹತ್ತಿದ್ರೆ ಮ್ಯಾಕಿಗೆ ಅದರ ಅವಶ್ಯಕತೆ ಇಲ್ಲವೇ ಇಲ್ಲ. ನಿಂತಲ್ಲೇ ಕೈ ಹಾಕಿ ತೆಗೆದುಕೊಳ್ಳಬಲ್ಲಳು.

ಮ್ಯಾಕಿ ಪಾದದ ಸೈಜ್ ಹದಿನಾರು. ಆ ಸೈಜಿನ ಶೂ, ಚಪ್ಪಲಿ ಎಲ್ಲಿಂದ ಸಿಗುತ್ತೆ ಪಾಪ! ಆರ್ಡರ್ ಕೊಟ್ಟೇ ಮಾಡಿಸಿಕೊಳ್ಳಬೇಕು. ಇಲ್ಲ ಹುಡುಕಿ ಹುಡುಕಿ ತಗೊಬೇಕು. ಬಟ್ಟೆಯಂತೂ XXX-large ಸೈಜೇ ಹುಡುಕಬೇಕು. ಅದೂ ಆಗಲಿಲ್ಲ ಅಂದ್ರೆ ಆರ್ಡರ್ ಕೊಟ್ಟು ಹೊಲಿಸದೆ ಬೇರೆ ದಾರಿಯೇ ಇಲ್ಲ.

ಇಂಥ ಮ್ಯಾಕಿ ಹುಟ್ಟಿದಾಗ ಎಷ್ಟುದ್ದ ಇದ್ದಳು ಗೊತ್ತಾ? ಹತ್ತೊಂಬತ್ತು ಇಂಚು. ಎಂಟು ವರ್ಷ ತುಂಬೋ ಅಷ್ಟರಲ್ಲಿ ಐದು ಅಡಿ ಒಂದು ಇಂಚು ಬೆಳೆದುಬಿಟ್ಟಿದ್ದಳು. ಹನ್ನೆರಡು ವರ್ಷವಾದಾಗ ಆರು ಅಡಿ ತೆಂಗಿನ ಮರ. ಸಾಮಾನ್ಯ ಮಕ್ಕಳು ವರ್ಷಕ್ಕೆ ಎರಡೂವರೆ ಇಂಚು ಬೆಳೆದ್ರೆ ಮ್ಯಾಕಿ ವರ್ಷಕ್ಕೆ ಐದು ಇಂಚು ಬೆಳಿತಾಳಂತೆ. ಇನ್ನೂ ಬೆಳಿತಾನೆ ಇದಾಳೆ. ಇಂಟರೆಸ್ಟಿಂಗ್ ಏನು ಅಂದ್ರೆ ಆಕೆ ಕುಟುಂಬದಲ್ಲಿ ಎಲ್ಲರೂ ಎತ್ತರ ಇರುವವರೆ.

ಇವಳಷ್ಟಿಲ್ಲ ಅಷ್ಟೆ.

ಅದೆಲ್ಲಾ ಸರಿ, ಇವಳಿಗೆ ಗಂಡು ಎಲ್ಲಿಂದ ಹುಡುಕೋದು ಅಂದ್ರಾ..ಅವಳಾಗಲೆ ಹುಡುಕೊಂಡವಳೆ ಬಿಡಿ.

ಹುಡುಗನ ಕಾಲು ಮಾತ್ರ ನಾರ್ಮಲ್ ಅಂತೆ.

    ಪೂರ್ವಿ

Please follow and like us: