ಈ ಕಲರ್ ಆಮೆಯನ್ನು ನೀವು ನೋಡೇ ಇಲ್ಲ ಅನಿಸುತ್ತೆ!

ಆಮೆ ಯಾವ ಕಲರ್ ಇರುತ್ತೆ?

ಕಪ್ಪು, ಹಸಿರು, ಸ್ವಲ್ಪ ಕೆಂಪು ಕಲರ್ ಆಮೆಗಳೂ ಇರ್ತವೆ ಅಲ್ವ. ವಾತಾವರಣದಿಂದ ವಾತಾವರಣಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅವುಗಳ ಬಣ್ಣ ಬದಲಾಗಿರುತ್ತೆ. ಆದ್ರೆ ಪ್ಯೂರ್ ಹಳದಿ ಬಣ್ಣದ ಆಮೆಯನ್ನ ಎಲ್ಲಾದ್ರೂ ನೀವು ನೋಡಿರಲಿಕ್ಕೆ ಸಾಧ್ಯಾನಾ?

ಬಹುಶಃ ಇಲ್ವೇನೋ.

ಪಶ್ಚಿಮ ಬಂಗಾಳದಲ್ಲಿ ಅಂಥದ್ದೊಂದು ಶುದ್ಧ ಹಳದಿ ಬಣ್ಣದ ಆಮೆ ಪತ್ತೆಯಾಗಿದೆ. ನೋಡೋಕೆ ಥೇಟ್ ಚಿನ್ನದ ಆಮೆ ಥರಾನೆ! ಎಷ್ಟು ಹಳದಿಯಾಗಿದೆ ಅಂದರೆ ಯಾರೋ ಹಳದಿ ಬಣ್ಣ ಹಚ್ಚಿ ನೀರಿಗೆ ಬಿಟ್ಟಂಗಿದೆ. ಇದು  Indian flap shell turtle ಗುಂಪಿಗೆ ಸೇರಿದ್ದು.

ಇಷ್ಟಕ್ಕೂ ಈ ಆಮೆ ಏಕೆ ಗೋಲ್ಡ್ ಕಲರ್ನಲ್ಲಿದೆ ಅಂದ್ರೆ genetic mutation ಅಥವಾ congenital disorder ಇರಬಹುದು. ಹಾಗೆ tyrosine pigment ಮಿಸ್ ಆಗಿರಬಹುದು ಅಂತಾರೆ ತಜ್ಞರು. ಸಾಮಾನ್ಯವಾಗಿ flap shell turtle ಹಸಿರು ಬಣ್ಣದಲ್ಲಿರುತ್ತವೆ. ಇದು ವಿಶೇಷಗಳಲ್ಲಿ ವಿಶೇಷ.

ಆಮೆಗಳು ವಿಷ್ಣುವಿನ ಅವತಾರ ಅಂತಾನೆ ಜನ ನಂಬಿದ್ದಾರೆ. ಜಗತ್ತನ್ನು ಉಳಿಸಲೆಂದೇ ವಿಷ್ಣು ಆಮೆ ರೂಪ ತಾಳಿದನಂತೆ. ಅದೇ ಕೂರ್ಮಾವತಾರ. ಎಷ್ಟೋ ದೇವಾಲಯಗಳಲ್ಲಿ ಆಮೆಯನ್ನೂ ಪೂಜಿಸಲಾಗುತ್ತದೆ.

ಗೋಲ್ಡನ್ ಆಮೆ ಎಲ್ಲರ ಕಣ್ಣು ಕುಕ್ಕುತ್ತಿರೋದಂತೂ ನಿಜ.

Please follow and like us: