’ಅಮ್ಮನ ಮನೆ’ಗೆ ಬಂದ ರಾಘವೇಂದ್ರ ರಾಜ್‌ಕುಮಾರ್…!

ದೊಡ್ಮನೆಯ ಮಗ, ನಟ ರಾಘವೇಂದ್ರ ರಾಜ್‌ಕುಮಾರ್ ತೆರೆ ಮೇಲೆ ಕಂಡು ಹಲವು ವರ್ಷಗಳು ಕಳೆದಿವೆ. 14 ವರ್ಷದ ಹಿಂದೆ ಬಂದ ‘ಪಕ್ಕದ ಮನೆ ಹುಡುಗಿ’ ಚಿತ್ರದಲ್ಲಿ ನಟಿಸಿದ್ದ ರಾಘವೇಂದ್ರ ಅವರು ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಸುದೀರ್ಘ 14 ವರ್ಷಗಳ ವಿರಾಮದ ನಂತರ ರಾಘವೇಂದ್ರ ರಾಜ್‌ಕುಮಾರ್ ಮತ್ತೆ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶಿಸುತ್ತಿರುವ ‘ಅಮ್ಮನ ಮನೆ’ ಚಿತ್ರದ ಮೂಲಕ ರಾಘವೇಂದ್ರ ರಾಜ್‌ಕುಮಾರ್ ಮತ್ತೆ ಬಣ್ಣ ಹಚ್ಚಲಿದ್ದಾರೆ.

Please follow and like us:

Leave a Reply