ಅಂಬಿಗೆ ವಯಸ್ಸಾಯ್ತು, ದಚ್ಚು- ಕಿಚ್ಚ ಒಂದಾದ್ರು!

ಕನ್ನಡ ಚಿತ್ರರಂಗದಲ್ಲಿ ವಿಷ್ಣು ದಾದ ಮತ್ತು ರೆಬೆಲ್ ಅಂಬಿ ಕುಚ್ಚಿಕ್ಕುಗಳಾಗಿ ಗುರುತಿಸಿಕೊಂಡವರು. ಆ ತಲೆಮಾರಿನ ನಂತರದ ತಲೆಮಾರಿನಲ್ಲಿ ಆ ರೀತಿಯ ಕುಚ್ಚಿಕ್ಕುಗಳು ಯಾರು ಅಂತ ಕೇಳಿದ್ರೆ ಯಾರಾದ್ರೂ ಡೌಟ್ ಇಲ್ಲದೇ ಹೇಳೋದು ‘ದಚ್ಚು – ಕಿಚ್ಚ’ ಅಂತ. ಸ್ಯಾಂಡಲ್‌ವುಡ್‌ನಲ್ಲಿ ಪ್ರಾಣ ಸ್ನೇಹಿತರಾಗಿದ್ದವರು ಸ್ಟಾರ್ ದರ್ಶನ್ ಮತ್ತು ಸುದೀಪ್. ಎಲ್ಲೇ ಕಾರ್ಯಕ್ರಮವಾದರೂ ಒಟ್ಟಾಗಿ ಕಾಣಿಸಿಕೊಳ್ತಿದ್ರು ಇವರಿಬ್ರು. ಆದರೆ ಕೆಲ ಕಾಲದ ಹಿಂದೆ ಇವರಿಬ್ಬರ ಸ್ನೇಹಕ್ಕೆ ಯಾರದ್ದೋ ಕೆಟ್ಟ ದೃಷ್ಟಿ ತಾಕಿತ್ತು. ಇದ್ದಕ್ಕಿದ್ದಂತೆ ಈ ಜೋಡಿ ದೂರ ದೂರವಾಗಿತ್ತು.

ಆದರೀಗ ಇವರಿಬ್ಬರ ಸ್ನೇಹ ಮತ್ತೆ ಚಿಗರೊಡೆಯುವಂತೆ ಕಾಣುತ್ತಿದೆ. ಹೌದು!… ವರುಷಗಳ ನಂತರ ದರ್ಶನ್ ಮತ್ತು ಸುದೀಪ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಆಗಸ್‌ಟ್ 10ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ರಿಲೀಸ್ ಕಾರ್ಯಕ್ರಮದಲ್ಲಿ ಚಂದನವನದ ಬಹುತೇಕ ತಾರೆಗಳು ಬಾಗವಹಿಸುತ್ತಿದ್ದಾರೆ. ಅದರಲ್ಲಿ ದರ್ಶನ್ ಕೂಡಾ ಇರಲಿದ್ದಾರೆ ಎಂದು ಈಗ ಸುದ್ದಿ ಹರಡುತ್ತಿದೆ.

ಅಂದ ಹಾಗೆ ಆಗಸ್ಟ್ 10ರಂದು ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿತ್ತು ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ. ಆದರೆ ಸ್ವಲ್ಪ ಬದಲಾವಣೆ ಮಾಡಿ ಚಿತ್ರದ ಆಡಿಯೋ ಅನ್ನು 10ರಂದು ರಿಲೀಸ್ ಮಾಡಲು ಹೊರಟಿದೆ. ಈ ಕಾರ್ಯಕ್ರಮಕ್ಕೆ ತಮಿಳಿನ ರಜನಿಕಾಂತ್ ಅನ್ನು ಸಹಾ ಆಹ್ವಾನಿಸಲಾಗಿದೆ. ರಜನಿ ಅಳಿಯ ಧನುಷ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುರಿದು ಬಿದ್ದಿದ್ದ ದಚ್ಚು – ಕಿಚ್ಚ ಸ್ನೇಹ ಈ ವೇದಿಕೆಯಲ್ಲಿ ಮತ್ತೆ ಗಟ್ಟಿಯಾಗಿ ಎ್ದದು ನಿಲ್ಲುತ್ತಾ?, ಅಂಬಿ ಇವರಿಬ್ಬರ ಸ್ನೇಹಕ್ಕೆ ಸೇತುವೆಯಾಗುತ್ತಾರಾ? ಕಾದು ನೋಡಬೇಕು.

Please follow and like us:

Leave a Reply